ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಜಮಾ ಬಂದಿ ಹಾಗೂ ಗ್ರಾಮ ಸಭೆ ಸಪ್ಟಂಬರ್ 6 ರಂದು ನಡೆಯಿತು. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗೈರುಹಾಜರಿಯಲ್ಲಿ ಹಿರಿಯ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಸತೀಶ್ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ರು ಸ್ವಾಗತಿಸಿ ಪಂಚಾಯತ್ ನ ಖರ್ಚುವೆಚ್ಚದ ಮಾಹಿತಿಯನ್ನು ನೀಡಿದರು. ಅದೇ ರೀತಿ ನಡೆದ ಕಾಮಗಾರಿಗಳ ವಿವರವನ್ನು ಮಂಡಿಸಿದರು. ಸಿ ಡಿ ಪಿ ನೋಡಲ ಅಧಿಕಾರಿ ಅವರ ಪರವಾಗಿ ಆಗಮಿಸಿದ್ದ ಕಾತ್ಯಾಯಿನಿಯವರು ವೇದಿಕೆಯಲ್ಲಿ ಹಾಜರಿದ್ದರು.
ಅಧ್ಯಕ್ಷರು ತಮ್ಮ ಭಾಷಣದಲ್ಲಿ ಗ್ರಾಮದ ಮಂದಿಗಿರುವ ಪರಮಾಧಿಕಾರವನ್ನು ಹೆಚ್ಚು ಜನ ಸೇರುವ ಮೂಲಕವಾಗಿ ಸ್ಪಂದಿಸಬೇಕೆಂದು ಕೇಳಿಕೊಂಡರು. ಸಿಬ್ಬಂದಿ ಕಿಶೋರ್ ಕಾರ್ಯಕ್ರಮ ನಿರ್ವಹಿಸಿ ರಾಜು ವಂದಿಸಿದರು.