ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಎಲಿಯಾಸ್ ಫೆರ್ನಾಂಡಿಸ್ ಅವರು 2ನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ರವಿವಾರ ಡಿಸೆಂಬರ್ 14 ರಂದು ನಡೆದ ಚುನಾವಣೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಉಪಾಧ್ಯಕ್ಷರಾಗಿ ಅವರು ಚುನಾಯಿತರಾಗಿದ್ದಾರೆ. 
ಕಾರ್ಯದರ್ಶಿಯಾಗಿ ರೋಶನ್ ಮೊಂತೇರೊ ಹಾಗೂ ಸರ್ವ ಆಯೋಗಗಳ ಸಂಯೋಜಕರಾಗಿ ವಿಲಿಯಂ ಲೋಬೊ ಅವರು ಆಯ್ಕೆಯಾದರು. ಎಲಿಯಾಸ್ ಫೆರ್ನಾಂಡಿಸ್ ಅವರು ಫೋರ್ ವಿಂಡ್ಸ್ ಜಾಹೀರಾತು ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.