ಮಂಗಳೂರು: ಕರ್ನಾಟಕ ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕರಾದ ಬಿ. ಕೆ. ಹರಿಪ್ರಸಾದ್ ರವರು ಇಂದು ತಾ 20.5.2022 ರಂದು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರುಗಳಾದ ಅತೀ ವಂದನೀಯ ರೈಟ್ ರಿವೆರೆಂಡ್ ಫಾ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ರವರನ್ನು ನಗರದ ಬಿಷಪ್ ಹೌಸ್ ನಲ್ಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ. ಆರ್. ಲೋಬೊ, ಕಾರ್ಪೋರೇಟರ್ ಗಳಾದ ನವೀನ್ ಡಿಸೋಜಾ, ಅಬ್ದುಲ್ ರವೂಫ್, ಎಐಸಿಸಿ ಕಾರ್ಯದರ್ಶಿ ಪಿ. ವಿ. ಮೋಹನ್, ಕಾಂಗ್ರೆಸ್ ನಾಯಕರಾದ ಟಿ. ಕೆ. ಸುಧೀರ್,ದಿನೇಶ್ ಆಳ್ವ,ಚಿತ್ತರಂಜನ್ ಶೆಟ್ಟಿ ಬೊಂಡಾಲ, ನಿತ್ಯಾನಂದ ಶೆಟ್ಟಿ, ಶಾನ್ ಡಿಸೋಜಾ, ಉದಯ್ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.