ಮಂಗಳೂರು, ಮೇ 02: ರೇಮಂಡ್ ಡಿಕೂನಾ ತಾಕೊಡೆ ಸಾರಥ್ಯದಲ್ಲಿ ಕಾರ್ಮಿಕ ದಿನಾಚರಣೆಯ ಕವಿಗೋಷ್ಠಿಯು ನಗರದ ಸಂದೇಶ ಸಭಾಂಗಣದಲ್ಲಿ ಯುವ ಕವಯಿತ್ರಿ ರೇಶ್ಮಾ ಶೆಟ್ಟಿ ಗೊರೂರು ಅಧ್ಯಕ್ಷತೆಯಲ್ಲಿ ನಡೆಯಿತು.

ಪಿಂಗಾರ ಸಾಹಿತ್ಯ ಬಳಗವು ಅಭಿಮೊ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಇದರ ಸಂಯುಕ್ತದಲ್ಲಿ ಡಾಕ್ಟರ್ ಸುರೇಶ ನೆಗಳಗುಳಿ ಅವರ ಸಂಚಾಲಕರಾಗಿ ದಕ,ಉಡುಪಿ, ಕಾಸರಗೋಡು, ಹಾಸನ ನಾಲ್ಕು ಜಿಲ್ಲೆಯ ಮೂವತ್ತೈದು ಕವಿಗಳು,ಕೊಂಕಣಿ, ಕನ್ನಡ, ತುಳು ಮೂರು ಭಾಷೆಗಳಲ್ಲಿ ತಮ್ಮ ಪ್ರಬುದ್ದವಾದ ಕಾರ್ಮಿಕ ಕವಿತೆಗಳು ಮಂಡಿಸಿದರು.

ಅದ್ಯಕ್ಷ ಸ್ಥಾನದಿಂದ ಗೊರೂರು ರೇಶ್ಮಾ ಶೆಟ್ಟಿ ಮಾತನಾಡಿ ಕವಿತೆಯು ಮಗು ಭಾವದಿಂದ ಬರೆಯುವ ಪ್ರಭದ್ದತೆ ಬೇಕು. ಆಗ ಮಾತ್ರ ಮದ ಮತ್ಸರ ಮೋಹಗಳರಹಿತ ಲೇಖನಿ ಚಲಿಸಬಹುದು ಹಾಗೂ ಸಕಲ ಮುಗ್ಧ ಭಾವಗಳು ಹೊರಹೊಮ್ಮೀತು ಎಂದರು.

ಪುಸ್ತಕ ಖರೀದಿ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅಲೋಶಿಯಸ್ ಕಾಲೇಜಿನ ಪ್ರಾಧ್ಯಾಪಕ ಡಾಕ್ಟರೇಟ್ ಜೆರಾಲ್ಡ್ ಡಿಸಿಲ್ವಾ ಮಾತನಾಡಿ ನಿರಂತರವಾಗಿ ಸಾಹಿತ್ಯದ ಕಾರ್ಯಕ್ರಮ ಆಯೋಜನೆ ಮಾಡುವ ಪಿಂಗಾರ ಸಾಹಿತ್ಯ ಬಳಗವು ಅಬಿನಂದನಾರ್ಹ ಎಂದರು.

ಮುಖ್ಯ ಅತಿಥಿ ಆಗಿ ಅಭಿಮೊ ಟೆಕ್ನಾಲಜೀಸ್ ಇದರ ಆಡಳಿತ ನಿರ್ದೇಶಕ ನವೀನ್ ನಾಯಕ್ ತನ್ನ ಸಹಯೋಗ ಸಾಹಿತ್ಯಕ್ಕೆ ಸದಾ ಇದೆ ಎಂದರು.

ಮರವಂತೆ ಪ್ರಕಾಶ ಪಡಿಯಾರ್, ರಾಣಿ ಪುಷ್ಪಲತಾ ದೇವಿ, ರೇಖಾ ಸುದೇಶ್ ರಾವ್, ವ, ಉಮೇಶ್ ಕಾರಂತ್, ಅನುರಾಧಾ ರಾಜೀವ್ ಸುರತ್ಕಲ್, ಪರಿಮಳಾ ಮಹೇಶ್, ಗೀತಾ ಲಕ್ಷ್ಮೀಶ, ಮನ್ಸೂರ್ ಮುಲ್ಕಿ, ಸೌಮ್ಯಾ ಗೋಪಾಲ್, ಗೋಪಾಲಕೃಷ್ಣ ಶಾಸ್ತ್ರಿ, ಗುಣಾಜೆ ರಾಮಚಂದ್ರ ಭಟ್ಟ, ಹಿತೇಶ್ ಕುಮಾರ್, ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ, ಅಶೋಕ್ ಕಡೆಶಿವಾಲಯ, ಚಂದ್ರಿಕಾ ಕೈರಂಗಳ, ಡಾ ವಾಣಿಶ್ರೀ ಕಾಸರಗೋಡು, ನಾರಾಯಣ ನಾಯ್ಕ ಕುದುಕೋಳಿ, ಗುರುರಾಜ್ ಎಂ ಆರ್, ಗಂಗಾಧರ ಗಾಂಧಿ, ವೆಂಕಟೇಶ ಗಟ್ಟಿ, ರಾಮಕೃಷ್ಣ ಶಿರೂರು, ರಶ್ಮಿ ಸನಿಲ್, ಕಿಶೋರ್ ಎಕ್ಕಾರ್ ಇವರು ತಮ್ಮ ಕವಿತೆಯನ್ನು ಸಾದರ ಪಡಿಸಿದರು.