ನನ್ನ ಪ್ರೀತಿಯ ಮನೆ ರಾಜನರಮನೆಯಲ್ಲ...
ಹುಲ್ಲ ಹೊದಿಕೆಯ ಹೊದ್ದ ಬಡ ಗುಡಿಸಲು. ..
ನನ್ನ ಪ್ರೀತಿಯ ಮನೆ, ಇದು ರಾಜನರಮನೆಯಲ್ಲ. ..
ನನ್ನ ಇಳೆಗಿಳಿಸಿದ ದೇವರಿದ್ದ ಗುಡಿಯು...||ಪ||
ಬಡತನದ ಛಾವಣಿಯೇ ಹೊದ್ದು ಮಲಗಿದ್ದರೂ..
ನನ್ನ ದೇವರು ಕಟ್ಟಿದನು ಮನೆಯ ಬಾಗಿಲಿಗೆ
ಖುಷಿಯ ತೋರಣವನು..
ತನ್ನ ನೋವನು ನುಂಗಿ, ನಮ್ಮ ನಗುವಲೇ ಸಿಹಿ ಉಂಡ..
ಬಡಿಸಿ ನಮಗೆ ಒಲವ ಹೂರಣವನು || ನನ್ನ ಪ್ರೀತಿಯ ||
ಗೋಡೆ ಗೋಡೆಗಳು ಹೇಳುವವು
ನನ್ನಪ್ಪ ಬೆವರು ಬಸಿದು,ಬಿಟ್ಟ ನಿಟ್ಟುಸಿರ
ಕತೆಯನು....
ನನ್ನ ದೇವರು ಅಂದು ಮನೆಗಾಗಿಯೇ
ದುಡಿ ದುಡಿದು ಮಡಿದನು...
ಹೇಳಲಿ ಯಾರ ಬಳಿ ಈ ವ್ಯಥೆಯನ್ನು.....||ನನ್ನ ಪ್ರೀತಿಯ||
ಅಡುಗೆಮನೆಯ ಗೋಡೆಗಳೇನು ಖುಷಿಯಿಂದ ನಗುತಿಲ್ಲ....
ಅವುಗಳೂ ಕಂಡಿಹವು ನನ್ನ ಮೊದಲ ದೇವರ ದುಃಸ್ಥಿತಿಯನ್ನು....
ಅವುಗಳೂ ಮರೆತಿಲ್ಲ, ನುಡಿಯಲಾರದೆ ಬಿಕ್ಕುವವು...
ಸುಮ್ಮನೆ ನಿಂತು ಸುರಿಸಿ ಕಣ್ಣೀರ ಕಂಠ ಬಿರಿದು
ಮತ್ತೆ ನೆನೆ ನೆನೆದು, ಮನೆಯೊಡತಿಗೆ ಬಂದ
ಬಹುಕೆಟ್ಟ ಪರಿಸ್ಥಿತಿಯನು .....||ನನ್ನ ಪ್ರೀತಿಯ ಮನೆ ||
-By ನಾಗರತ್ನ .ಎಂ.ಹೊಳ್ಳ
(ಸುಮತಪಸ್ವಿನಿ) ಗೃಹಿಣಿ
ನರಸಿಂಹರಾಜಪುರ ತಾಲ್ಲೂಕು.
ಚಿಕ್ಕಮಗಳೂರು ಜಿಲ್ಲೆ