ಭಾವವಿರದ ಭಾವಗೀತೆ
ಹೇಗೆ ನಾನು ಬರೆಯಲಿ |
ನೋವು ಕೊಡುವ ನಿನ್ನ ನೆನಪ
ಹೇಗೆ ನಾನು ಮರೆಯಲಿ || ಪ ||

ಕಂತೆ ಕಂತೆ ಚಿಂತೆಯಂತೆ
ಬದುಕು ಸಂತೆ ಒರತೆಯು |
ಬದುಕು ಏಕೇ ಒರತೆಯು
ನೀನೆ ಏಕೇ ಬೆರೆತೆಯೋ || ಅ.ಪ ||

ನೀ ಇಲ್ಲ ಏನು ಇಲ್ಲ,
ಎಲ್ಲ ಇಲ್ಲಿ ಕೊರತೆಯು,
ಬರಿದು ಮಾಡಿ ಕುಳಿತೇನೊ ,
ಮೌನ ವೀಣೆ ನುಡಿಸುತ,
ನನ್ನೆ ನಾ ಮರೆಯುತಾ,
ನಿನ್ನ ನಾ ಹುಡುಕುತಾ || ಭಾವವಿರದ ||

ದೂರ ದೂರ ಭಾವ ತೀರ,
ಮುಳುಗೋ ಹುಚ್ಚು ಏತಕೇ,
ಬಾರಾ ಬಾರ ಬಂದು ಬಿಡು ನೀ ,
ಕಣ್ಣೀರಾಗಿ ಹರಿಯುತ ,
ಒಲವ ಭಾವ ನಿನ್ನದೇನೊ ,
ತನುವು ಸುಡುವುದೇತಕೋ || ಭಾವವಿರದ ||

ರಾತ್ರಿ ಕಂಡ ಕನುವಿನಲ್ಲು
ಮನಕೆ ಖಾತ್ರಿ ಇಲ್ಲವೋ |
ಚಿಂತೆ ಬಿಟ್ಟು  ನಡೆದೆ ನಾನು
ಬದುಕು ಒಂದು ಸಂತೆಯೋ |

ದೂರ ದೂರ ಹೋಗಿ ಬಿಡು... ನೀ
ದಾರಿ ತಿಳಿಯದಂತೆಯೊ ||
ಹೆಚ್ಚು ಹುಚ್ಚು ನನಗೆ ಕೊಡು ನೀ,
ಮರುಗಿ ಮರುಗಿ ಸಾಯುವೇ,
ಕರಗಿ ಕರಗಿ ಬೇಯುವೇ.. || ಭಾವವಿರದ||



-By ನಾಗೇಶ್ ಜಿ ಗಡಿಗೇಶ್ವರ್ , 

ಚಿಕ್ಕಮಗಳೂರು