ಕೇಳುವವರು ತನ್ನವರು

ಹಲವರು ಮದುವೆ

ಮಕ್ಕಳು ಎನ್ನುವ

ನೂರಾರು ಪ್ರಶ್ನೆಗಳನ್ನ

ಮದುವೆ ನಂತರ ಹೆಣ್ಣೊಬ್ಬಳು

ಅನುಭವಿಸು ನೋವು ಯಾತನೆಗಳನ್ನ ಯಾರೂ ಕೇಳರು ಸಂತೈಸರು


ಅವಳ ಪತಿ ಅನಾರೋಗ್ಯವಾದರೂ

ಅವಳ ಪತಿಗೆ ಬಡತನ ಬಂದರೂ

ಅವಳ ಪತಿ ಮರಣ ಹೊಂದಿದರು

ಅವಳ ಕಾಲುಗುಣದ ಪ್ರಭಾವವೆಂದೇ ದೋಷಿಸುವವರು ತನ್ನವರೇ ಅವಳನ್ನ ಜರಿಯುವವರು


ಮಕ್ಕಳಾಗದಿದ್ದರೇ ಬಂಜೆಯಪಟ್ಟ

ಪತಿ ವಿಧಿವಶವಾದರೆ ವಿಧವೆಯಪಟ್ಟ

ನೇರ ಮಾತನಾಡಿದರೇ ಜಗಳಗಂಟಿಯಾಪಟ್ಟ

ಮೌನಿಯಾದರೆ ಅಹಂಕಾರಿಯಪಟ್ಟ


ಹೆಣ್ಣಾದರೇನು ಅವಳಿಗೂ ಮುಗ್ಧ ಮನಸ್ಸಿದೆ

ಅವಳಿಗೂ ನೂರಾರು ಕನಸುಗಳಿದೆ

ಅವಳಿಗೂ ಸ್ವತಂತ್ರವಾಗಿ ಬದುಕುವ ಹಂಬಲವಿದೆ

ಎಲ್ಲಾವನ್ನು ಸಹಿಸಿಕೊಂಡು ಬದುಕುವ ದೊಡ್ಡ ಗುಣವಿದೆ


-By ರೇಷ್ಮಾ ಶೆಟ್ಟಿ