ಹೆಣ್ಣು ಮುಗ್ಧ ಮನಸ್ಸಿನವಳು

ತಾಳ್ಮೆ ಸಹನೆ ಉಳ್ಳವಳು

ಹಾಗಂತ ಭೋಗದ ವಸ್ತು ಅವಳಲ್ಲಾ


ಅವಳು ಪವಿತ್ರವಾದವಳು

ಪೂಜಿಸದಿದ್ದರೂ ಪರವಾಗಿಲ್ಲ

ಗೌರವಿಸಿ ಅವಳನ್ನ


ಸಂಸಾರಕ್ಕೆ ಕಣ್ಣಾಗುವವಳು

ಮನೆಯನ್ನ ಬೆಳಗುವವಳು 

ಸ್ವತಂತ್ರವಾಗಿ ಬದುಕಲು

ಬಿಡಿ ಅವಳನ್ನ......


ಹೆಣ್ಣು ಯಾರ ಆಸ್ತಿಯಲ್ಲಾ

ಯಾರ ದಾಹದ ಆಹಾರವಲ್ಲಾ

ಅವಳು ನಿಮ್ಮ ಹಾಗೆಯೇ

ಒಂದು ಜೀವನೇ ತಾನೇ.


-By ರೇಷ್ಮಾ ಶೆಟ್ಟಿ