ಸೋರುತಿಹುದು ಮನೆಯ ಮಾಳಿಗೆ,
ಉಳ್ಳವನ ದೀನನ ಎಲ್ಲರ ಜೋಳಿಗೆ
ತೂತುಗಳಿಗೆ ಕಮ್ಮಿ ಇಲ್ಲ,
ಮಾತುಗಳಿಗೆ ಕೊರತೆ ಇಲ್ಲ,
ತೇಪೆಗಳು ಬೇಕಾಗಿದೆ
ಹೊದಿಸಿ ಸೂರ ಮುಚ್ಚಗೆ,
ಉಂಡು ಮಲಗಲು ಬೆಚ್ಚಗೆ
ಖಾಲಿ ಇದೆ ಹಣದ ಚೀಲ,
ಮರುಗುವ ಜೀವವಿಲ್ಲದೆ,
ಪ್ರೀತಿಗೆ ಸಮಯವಿಲ್ಲದೆ
ಮಿಡಿಯುವ ಮನಸ್ಸಿಲ್ಲದೆ,
ಒಡನಾಟದ ಸಖ್ಯವಿಲ್ಲದೆ
ಬರಿದು ಬಿದ್ದಿದೆ ಹಸಿದ ಚೀಲ,
ಕರುಣೆ ಸೂಸುವ ಕಂಗಳಿಲ್ಲದೆ,
ದಯೆ ತೋರುವ ಹೃದಯವಿಲ್ಲದೆ
ಜರಿವ ಹೀನ ನಾಲಗೆಯಿಂದ,
ಸಹಾಯ ಮಾಡುವ ಕೈಗಳಿಲ್ಲದೆ
ಸೋರುತಿಹುದು ಮನೆಯ ಮಾಳಿಗೆ,
ತೇಪೆಗಳು ಬೇಕಾಗಿದೆ....
-By ಶುಭ ನಾಗರಾಜ್ ಹೆಗಡೆ
ಸಾಫ್ಟ್ವೇರ್ ಉದ್ಯೋಗಿ, ಬೆಂಗಳೂರು.