ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, 2024ನೇ ಸಾಲಿನಲ್ಲಿ ನಡೆಸಿದ್ದ ಪದವಿ ಪರೀಕ್ಷೆಗಳ ರ‍್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಆಳ್ವಾಸ್‌ನ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 9 ರ‍್ಯಾಂಕ್‌ಗಳಿಸಿದ್ದಾರೆ.

ಪದವಿ ರ‍್ಯಾಂಕ್‌ಗಳು:

ಬಿಎಚ್‌ಎ ವಿಭಾಗದ ಪ್ರತೀಕ್ಷಾ ದ್ವಿತೀಯ ರ‍್ಯಾಂಕ್, ಸಾಕ್ಷಿ ಸಿಎಸ್ ತೃತೀಯ ರ‍್ಯಾಂಕ್, ಸ್ನೇಹಾ 5ನೇ ರ‍್ಯಾಂಕ್, ವರ್ಷಿಣಿ ಎ 9ನೇ ರ‍್ಯಾಂಕ್, ಸೌರಕ್ಷಾ ಶೆಟ್ಟಿ 10ನೇ ರ‍್ಯಾಂಕ್ ಪಡೆದರೆ,  ಬಿಎಸ್ಸಿ ಎಂಎಲ್‌ಟಿ ವಿಭಾಗದ ಸುಪ್ರೀತಾ ಜೈನ್ 6ನೇ ರ‍್ಯಾಂಕ್ ಗಳಿಸಿ ಪದವಿ ವಿಭಾಗದಲ್ಲಿ ಒಟ್ಟು 6 ರ‍್ಯಾಂಕ್‌ಗಳು ಕಾಲೇಜಿಗೆ ಲಭಿಸಿದೆ.

ಸ್ನಾತಕೋತ್ತರ ರ‍್ಯಾಂಕ್‌ಗಳು:

ಎAಎಚ್‌ಎ ವಿಭಾಗದಲ್ಲಿ ಪ್ರಜ್ಞಾ 5ನೇ ರ‍್ಯಾಂಕ್ ಹಾಗೂ ರಮ್ಯಾ ಕೆ ಎನ್ 8ನೇ ರ‍್ಯಾಂಕ್ ಪಡೆದರೆ, ಎಂ.ಎಸ್ಸಿ ಕ್ಲಿನಿಕಲ್ ಸೈಕಾಲಜಿಯ  ಫಾತಿಮಾ ಫಾಹಿಮಾ 9ನೇ ರ‍್ಯಾಂಕ್ ಗಳಿಸಿದ್ದಾರೆ.ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ಡಾ ವಿನಯ್ ಆಳ್ವ, ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಮುಖ್ಯಸ್ಥ ಡಾ ಶಂಕರ ಶೆಟ್ಟಿ ಅಭಿನಂದಿಸಿದ್ದಾರೆ.