Images: dtnext

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಪಿ. ಪ್ರೀತಿ ಅವರು ಎಂಡೋಸಲ್ಫಾನ್ ಪೀಡಿತೆ ಯುವತಿಯ ಅತ್ಯಾಚಾರ ಮಾಡಿದ್ದ 33ರ ರಾಜೇಶ್ ರೈಗೆ 10 ವರುಷಗಳ ಜೈಲು ಶಿಕ್ಷೆ ವಿಧಿಸಿದರು.

2015ರಲ್ಲಿ ಪ್ರಕರಣ ನಡೆದಿತ್ತು, ವಿಟ್ಲ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೈ 19ರ ಎಂಡೋ ಪೀಡಿತೆ ವಿಶೇಷ ಚೇತನ ಯುವತಿಯನ್ನು ಪುಸಲಾಯಿಸಿ ಯಾರೂ ಇಲ್ಲದಿದ್ದಾಗ ಅತ್ಯಾಚಾರ ಮಾಡಿದ್ದ. ಸೆಪ್ಟೆಂಬರ್ 7ರಂದು ಕೋರ್ಟು ಆರೋಪಿ ತಪ್ಪಿತಸ್ಥ ಎಂದು ತೀರ್ಪು ನೀಡಿ, ನಿನ್ನೆ ಶಿಕ್ಷೆ ಪ್ರಕಟಿಸಿತು.