ತೆರಿಗೆ ಏರಿಕೆಗೆ ರಾಜ್ಯಗಳು ಕಾರಣ, ಕಲ್ಲಿದ್ದಲು ಕೊರತೆಗೆ ರಾಜ್ಯಗಳು ಕಾರಣ, ಆಮ್ಲಜನಕ ಕೊರತೆಗೆ ರಾಜ್ಯಗಳು ಕಾರಣ ಎಂದು ಪಟ್ಟಿ ಮಾಡುತ್ತ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಧಾನಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ದಬ್ಬಾಳಿಕೆಯ ಒಕ್ಕೂಟ ವ್ಯವಸ್ಥೆಯನ್ನು ದೇಶದ ಮೇಲೆ ಹೇರುವ ಪ್ರಧಾನಿಯಿಂದ ರಾಜ್ಯಗಳಿಗೆ ಪುಕ್ಕಟೆ ಉಪದೇಶ ಮಾತ್ರ ಎಂದು ಪ್ರತಿಪಕ್ಷಗಳು ಪ್ರಧಾನಿ ಮೋದಿಯವರ ಮೇಲೆ ಹರಿಹಾಯ್ದಿದ್ದಾರೆ.

ರಾಜ್ಯಕ್ಕೆ ಬರಬೇಕಾದ 97,000 ಕೋಟಿ ರೂಪಾಯಿಯನ್ನು ಮೋದಿ ಸರಕಾರ ಬಾಕಿ ಉಳಿಸಿಕೊಂಡಿದೆ ಎಂದು ಪಡುವಣ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕುಟುಕಿದ್ದಾರೆ. ಕೇಂದ್ರ ಬಾಕಿ ಕೊಟ್ಟಿಲ್ಲ ಎಂಬುದು ರಾಜ್ಯಗಳ ಪ್ರಮುಖ ದೂರು ಆಗಿದೆ.