ಹುಬ್ಬಳ್ಳಿ ಗಲಭೆಯು ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೃಷ್ಟಿ ಎಂದು ಹೇಳಿಕೆ ನೀಡಿರುವ ನಳಿನ್ ಕುಮಾರ್‌ರಿಂದ ನೋಟೀಸು ನೀಡಿ ಹೇಳಿಕೆ ಪಡೆಯಿರಿ ಇಲ್ಲವೇ ಎಫ್‌ಐಆರ್ ದಾಖಲಿಸಿ ಎಂದು ಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ವೇದವ್ಯಾಸ ಕೌಜಲಗಿ ದೂರು ನೀಡಿದ್ದಾರೆ.

ಹಳೆ ಹುಬ್ಬಳ್ಳಿ ಪೋಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹೇಳಿದ್ದರ ಬಗೆಗೆ ಹೇಳಿಕೆ ದಾಖಲಿಸಿಕೊಳ್ಳಿ. ತಪ್ಪಿದರೆ ಎಫ್‌ಐಆರ್ ದಾಖಲಿಸಿ ಎಂದು ಕೌಲಗಿ ದೂರಿತ್ತಿದ್ದಾರೆ.