ಮಂಗಳೂರು: 2022ನೇ ಸಾಲಿನ ಮುಸ್ಲಿಂ ಸಮುದಾಯದ ಪವಿತ್ರ ಹಬ್ಬವಾದ ಬಕ್ರೀದ್ ಆಚರಣೆಯು  ಜುಲೈ ತಿಂಗಳ 10ರಂದು ಆಚರಿಸಲಾಗುತ್ತಿದ್ದು ಮುಸ್ಲಿಂ ಸಮುದಾಯವು ಅಂದು ಹಾಗೂ ನಂತರದ ಮೂರು ದಿನಗಳವರೆಗೆ ಖುರ್ಬಾನಿ ಸಂಪ್ರದಾಯವಿದ್ದು ಈ ಧಾರ್ಮಿಕ ಕಾರ್ಯಕ್ಕೆ ಯಾವುದೇ ಅಡೆತಡೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಬೇಕೆಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರ ನಿರ್ದೇಶನದಂತೆ ದ.ಕ ಜಿಲ್ಲಾಧಿಕಾರಿಗಳು ಹಾಗೂ ಇನ್ಸ್ಪೆಕ್ಟರ್  ಜನರಲ್ ಆಫ್ ಪೊಲೀಸ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.

ನಿಯೋಗದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಸಿ. ಮಹಮೂದ್, ಕೆ. ಅಶ್ರಫ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಮೊದಲಾದವರು ಉಪಸ್ಥಿತರಿದ್ದರು.