ರಶಿಯಾದ ಪಡೆಗಳು ರಶಿಯಾದ ಹೊರ ವಲಯ ಒಬೊಲನ್ಸ್ಕಿ ಮೂಲಕ ಉಕ್ರೇನಿನ ರಾಜಧಾನಿ ಕೀವ್ ಪ್ರವೇಶಿಸಿವೆ. ತೀವ್ರ ಯುದ್ಧವನ್ನು ರಾಜಧಾನಿಯ ಬೀದಿಗಳು ನೋಡುತ್ತಿವೆ.

ಉಕ್ರೇನ್ ಶರಣಾದರೆ ಮಾತ್ರ ಮಾತುಕತೆ ಎಂದು ರಶಿಯಾ ಹೇಳಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸರಿ, ಸಂಧಾನಕ್ಕೆ ನಾನು ಸಿದ್ಧ ಎಂದು ಚೀನಾ ಹೇಳಿದೆ. 

30 ಲಕ್ಷ ಜನರು ಇರುವ ರಾಜಧಾನಿ ಕೀವ್‌ನ ಸಾಕಷ್ಟು ಕಟ್ಟಡಗಳು ಹಾನಿಗೀಡಾಗಿವೆ. ಎರಡೂ ಕಡೆ 5 ಸಾವಿರದಷ್ಟು ಜೀವ ನಷ್ಟ ಆಗಿರುವುದಾಗಿ ಹೇಳಲಾಗಿದೆ.