ಕೊಣಾಜೆ : ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಕೊಣಾಜೆ, ಮಂಗಳ ಗ್ರಾಮೀಣ ಯುವಕ ಸಂಘ (ರಿ) ಕೊಣಾಜೆ , ಮಂಗಳೂರು ವಿಶ್ವವಿದ್ಯಾನಿಲಯ, ಇದರ ಜಂಟಿ ಆಶ್ರಯದಲ್ಲಿ 2021 - 2022 ರ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮವು ದಿನಾಂಕ 25.02.2022 ಕೊಣಾಜೆ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕಿಶೋರ್ ಕುಮಾರ್ ಸಿ. ಕೆ. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ಕಾರದ ಸೇವೆಯನ್ನು ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಯುವ ಜನರಿಗೆ ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಣಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಚಂಚಲಾಕ್ಷಿ ರವರು ವಹಿಸಿ ಗ್ರಾಮ ಪಂಚಾಯತ್ ನ ಸಹಕಾರ ಮತ್ತು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭರವಸೆಯ ಮಾತುಗಳನ್ನು ಆಡಿದರು. ಗೌರವ ಉಪಸ್ಥಿತರಾಗಿ ಆಗಮಿಸಿದ ಜಿಲ್ಲಾ ಯುವ ಅಧಿಕಾರಿಗಳಾದ ರಘುವೀರ್ ಸೂಟರ್ ಪೇಟೆ ಅವರು ಕಾರ್ಯಕ್ರಮದ ಉದ್ದೇಶ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಯುವ ನಾಯಕತ್ವವನ್ನು ರೂಢಿಸಿಕೊಳ್ಳವ ಹಂತಗಳ ಬಗ್ಗೆ ನೆರೆದಿರುವ ಯುವ ಜನತೆಗೆ ಸಲಹೆಗಳನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಆಸಿನರಾಗಿದ್ದ ಅಚ್ಚುತ ಗಟ್ಟಿ ಯವರು ಯುವ ಜನರಿಗೆ ಇರುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೇನೇ ಕೊಣಾಜೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ನಝಾರ್ ಶಾ ಪಟ್ಟೋರಿ ರವರು ಯುವಕರನ್ನು ಉದ್ದೇಶಿಸಿ ಉತ್ತಮ ಮಾತುಗಳನ್ನು ಆಡಿದರು.
ಹಾಗೇನೇ ಮಾಜಿ ಅಧ್ಯಕ್ಷರು ಮಂಗಳ ಗ್ರಾಮೀಣ ಯುವಕ ಸಂಘ (ರಿ) ಕೊಣಾಜೆ ಅಬ್ದುಲ್ ನಾಸಿರ್ ಕೆ. ಕೆ. ಅವರು ಮಾತನಾಡಿ ಯುವಕರಿಗೆ ಶುಭ ಹಾರೈಸಿದರು. ಹಾಗೆಯೇ ಮತ್ತೋರ್ವ ಅತಿಥಿ ಗಣ್ಯರಾದ ನೌಶಾದ್ ಕೊಣಾಜೆ ಅಧ್ಯಕ್ಷರು ಸ್ಫೂರ್ತಿ ಯುವಕ ಮಂಡಲ ಮೋಡಿಜೇರ ಇವರು ಯುವಕರಿಗೆ ಸ್ಪೂರ್ತಿಯ ಮಾತುಗಳನ್ನು ಆಡಿದರು.
ವೇದಿಕೆಯಲ್ಲಿ ಶೌಖತ್ ಆಲಿ ಮಾಜಿ ಅಧ್ಯಕ್ಷರು, ಕೊಣಾಜೆ ಗ್ರಾಮ ಪಂಚಾಯತ್. ರಾಮಕೃಷ್ಣ ಪಟ್ಟೋರಿ ಉಪಾಧ್ಯಕ್ಷರು, ಕೊಣಾಜೆ ಗ್ರಾಮ ಪಂಚಾಯತ್. ರಿಯಾಜ್ ಪಾವೂರು ಅಧ್ಯಕ್ಷರು, ವೈ.ಎಫ್. ಸಿ. ಕೊಣಾಜೆ, ರಕ್ಷಾ ಪ್ರತಿನಿಧಿ ನೆಹರು ಯುವ ಕೇಂದ್ರ ಮಂಗಳೂರು ದ.ಕ.ಜಿಲ್ಲೆ ಇವರೆಲ್ಲರೂ ಉಪಸ್ಥಿತರಿದ್ದರು. ಹಾಗೇನೆ ಮಂಗಳೂರು ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಗಳು ಕ್ಲಬ್ ನ ಸದಸ್ಯರು ನೆರೆದಿದ್ದರು.
ಬಂದಿರುವ ಗಣ್ಯರನ್ನು ಹೃದಯ ಪೂರ್ವಕವಾಗಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಮಂಗಳ ಗ್ರಾಮೀಣ ಯುವಕ ಸಂಘ (ರಿ) ಕೊಣಾಜೆ ಎ. ಕೆ. ಅಬ್ದುಲ್ ರಹಿಮಾನ್ ಕೋಡಿಜಾಲ್ ಇವರು ಸ್ವಾಗತ ಭಾಷಣವನ್ನು ಮಾಡಿದರು. ಹಾಗೂ ಬಂದಿರುವ ಗಣ್ಯ ವ್ಯಕ್ತಿಗಳನ್ನು ತುಂಬು ಹೃದಯ ಪೂರ್ವಕವಾಗಿ ಧನ್ಯವಾದ ಭಾಷಣವನ್ನು ವಿನುತಾ ಅತಿಥಿ ಉಪನ್ಯಾಸಕರು ಮಂಗಳೂರು ವಿಶ್ವವಿದ್ಯಾನಿಲಯ ಇವರು ನೆರೆವೇರಿಸಿ ಕೊಟ್ಟರು.
ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರ ಮಂಗಳೂರು ದ.ಕ. ಜಿಲ್ಲೆ ಇದರ ತಾಲ್ಲೂಕು ಪ್ರತಿನಿಧಿಯಾದ ಶ್ರೀ ನಾಗರಾಜ್ ಹೆಚ್. ಜಿ. ಇವರು ನಿರೂಪಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಯಗೊಂಡಿತು..