ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ|ಸ್ಟ್ಯಾನಿ ಗೋವಿಯಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ  ಧನಾತ್ಮಕ ಪ್ರಭಾವವನ್ನು ಬೀರುವರು.  ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಸದಾ ಜ್ಞಾನಾಭಿವೃದ್ಧಿಯನ್ನು ಮಾಡುತ್ತಲೇ ಇರುತ್ತಾರೆ. ವಿದ್ಯಾರ್ಥಿಗಳ ಸರಿ ತಪ್ಪುಗಳನ್ನು ಬೇರ್ಪಡಿಸಿ ಸನ್ಮಾರ್ಗದ ದಾರಿಗೆ ಕೊಂಡೊಯ್ಯುವವರು ಶಿಕ್ಷಕರು. ಗುರುಗಳ ಮಾತನ್ನು ಪಾಲಿಸಿದರೆ ಸಾಧನೆಯೆಡೆಗೆ ಹೋಗಲು ಸಾಧ್ಯ ಎಂದು ಅವರು ಹೇಳಿದರು ಕಾಲೇಜಿನ ಪ್ರಾಂಶುಪಾಲರಾದ ವಂ| ಜೆರೊಮ್ ಡಿಸೋಜ ಶಿಕ್ಷಕರ ಮಹತ್ವದ ಕುರಿತು ಮಾತನಾಡಿದರು.

ಉಪನ್ಯಾಸಕಿ  ಲೆಜ್ವಿನ್ ಜೆಶಲ್ ಶಿಕ್ಷಕರ-ವಿದ್ಯಾರ್ಥಿಗಳ ಬಾಂಧವ್ಯದ ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಆಂಕಿತ ಗುರು ವಂದನೆಯನ್ನು ಸಲ್ಲಿಸಿದರು. ಮಹಮ್ಮದ್ ಇಸಾಕ್ ಸ್ವಾಗತಿಸಿ,ಸೌರವ್ ವಂದಿಸಿದರು , ಜೊಹನ್, ಮೌಶಿನಾ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.