ಜಾಗತಿಕ ಮಾರುಕಟ್ಟೆ ಹಿಡಿಯುವ ನಿಟ್ಟಿನಲ್ಲಿ ಕರ್ನಾಟಕದ ಹಾಲು ಮಹಾ ಮಂಡಳಿಯ ನಂದಿನಿ ಕೆಫೆ ಮೂ ದುಬಾಯಿಯಲ್ಲಿ ತೆರೆಯಲ್ಪಟ್ಟಿದೆ.

ನಂದಿನಿಯ ರುಚಿಗೆ ದುಬಾಯಿ ಜನ ಮನಸೋತಿದ್ದಾರೆ. ನಮ್ಮ ಬೆಲೆ ಕೂಡ ಕಡಿಮೆ ಇರುವುದು ಜನರಿಗೆ ಹಿಡಿಸಿದೆ. ನಮ್ಮ ಉತ್ಪನ್ನಗಳು ಜಾಗತಿಕ ಮನ್ನಣೆ ಪಡೆಯುತ್ತಿವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಈ ಸಂದರ್ಭದಲ್ಲಿ ಹೇಳಿದರು.