ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಇರುವ 776 ಸಂಸದರಲ್ಲಿ 306 ಜನರು ಕ್ರಿಮಿನಲ್ ಆರೋಪ ಹೊತ್ತಿರುವುದು ಅವರು ಸಲ್ಲಿಸಿರುವ ಪ್ರಮಾಣ ಪತ್ರಗಳಿಂದ ತಿಳಿದು ಬಂದಿದೆ.

ಈ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ಸಂಸದರಲ್ಲಿ 194 ಜನರು ಗಂಭೀರ ಸ್ವರೂಪದ ಆರೋಪ ಎದುರಿಸುತ್ತಿದ್ದಾರೆ. ಲಕ್ಷ ದ್ವೀಪದ ಏಕೈಕ ಸಂಸದ ಸಹಿತ 11 ಸಂಸದರು ಕೊಲೆ ಆರೋಪ ಎದುರಿಸುತ್ತಿದ್ದಾರೆ.

ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಡುವಣ ಬಂಗಾಳ, ಕೇರಳದ ಆರೋಪಿ ಸಂಸದರ ಪ್ರಮಾಣ ಹೆಚ್ಚು ಇದೆ.

ಬಿಜೆಪಿಯ 98, ಕಾಂಗ್ರೆಸ್ಸಿನ 26, ತೃಣಮೂಲ ಕಾಂಗ್ರೆಸ್ಸಿನ 7 ಎಂದು ಎಲ್ಲ ಪಕ್ಷಗಳಲ್ಲೂ ಕೆಲವರು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ.