ಕಳೆದ ವಾರ ಗ್ರೀಸ್‌ನಲ್ಲಿ ಹಾನಿ ಉಂಟು ಮಾಡಿದ ಡೇನಿಯಲ್ ಚಂಡಮಾರುತವು ಮೆಡಿಟರೇನಿಯನ್ ಸಮುದ್ರ ದಾಟಿ ಲಿಬಿಯಾಕ್ಕೆ ಬಡಿದು ಅಪಾರ ಹಾನಿ ಉಂಟುಮಾಡಿದೆ.

Image: India Today
ಎರಡು ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾದರು ಮತ್ತು ಲಕ್ಷದಷ್ಟು ಜನರು ನೆಲೆ ಕಳೆದುಕೊಂಡರು.
ದೆರ್ನಾ ನಗರದ ಬಳಿಯ ಅಣೆಕಟ್ಟು ಒಡೆದು ಒಮ್ಮೆಗೇ ಏರಿದ ಪ್ರವಾಹದಲ್ಲಿ ನಗರ ಮುಳುಗೇಳುತ್ತಿದೆ. ಪುರಾತನ ಸೈರೆನ್, ಶಹಾತ್ ನಗರಗಳ ಸಂಪರ್ಕ ರಸ್ತೆಗಳು ಕೊಚ್ಚಿ ಹೋಗಿವೆ. ಚಾರಿತ್ರಿಕ ನೆಲೆಗಳು ಹಾನಿಗೀಡಾಗಿವೆ.