ಹಸಿರು ಸೀರೆಯ ಉಟ್ಟು

ಕೈಗೆ ಬಳೆಯ ತೊಟ್ಟು

ಹೂ ಗಿಡ ದ ನಡುವೆ ಹೋದೆ ಏಕೆ ನನ್ನೊಲವೆ ॥


ದುಂಬಿಗಳು ಹೂ ಎಂದು ನಿನ್ನರಳಿದ ತುಟಿಯ ಕಚ್ಚಿ ಹೀರಲುಬಹುದು,

ಸುಳಿಗಾಳಿ ನಿನ್ನ ಜಡೆಯೊಳ ಹೊಕ್ಕಿ ಸುಳಿದಾಡುವ ಪರಿಗೆ

ನೀ ಜಾರಿ ಬೀಳಲುಬಹುದು ॥


ಸೂರ್ಯ ನಿನಗೆ ಮುತ್ತಿಕ್ಕಿ

ತನ್ನ ತಾ ಮರೆತು

ಈ ಜಗವ ಸುಡಲುಬಹುದು

ಕವಿಯ ಕಣ್ಣಿಗೆ ಕಾಣದಿರು

ಹುಚ್ಚಿಡಿದು ಅವ

ಊರುರ ಸುತ್ತಬಹುದು

ನಿನ್ನೆಸರ ಜಪಿಸಲುಬಹುದು ॥


ಹಸಿರು ಸೀರೆಯ ಉಟ್ಟು

ಕೈಗೆ ಬಳೆಯ ತೊಟ್ಟು

ಹೂ ಗಿಡ ದ ನಡುವೆ ಹೋದೆ ಏಕೆ ನನ್ನೊಲವೆ ॥

- ನಾಗೇಶ್ ಗಡಿಗೇಶ್ವರ.