ಮಂಗಳೂರು : ಕಥೆಯನ್ನು ಬರೆಯುವಾಗ ಪೂರ್ವಸಿದ್ಧತೆ,ವಸ್ತು, ಪಾತ್ರ ಸೃಷ್ಟಿ ಮತ್ತು ಓದಿಸಿಕೊಂಡು ಹೋಗುವ ನವಿರು ನಿರೂಪಣೆ, ನಿಗೂಢತೆ ಮುಖ್ಯ. ಮೂಗುವಿಕೆಯೇ ಕಥೆಗಾರನ ಜೀವಾಳ.ಕಥೆಗಳಲ್ಲಿ ಕೇವಲ ವಾಸ್ತವದ ಸಂಗತಿಗಳನ್ನು ನೇರ ಹೇಳದೆ ಮಸಾಲೆ ರುಚಿಯೂ ಸಮ್ಮಿಳಿತವಾಗಿದ್ದರೆ ಓದುಗರಿಗೆ ಕಥೆಗಳು ಇಷ್ಟವಾಗುತ್ತವೆ' ಎಂದು ಪಣಿಯಾಡಿ ಪ್ರಶಸ್ತಿ ಪುರಸ್ಕೃತ ಲೇಖಕಿ ಅಕ್ಷಯ ಆರ್ ಶೆಟ್ಟಿ ಹೇಳಿದರು. ಅವರು ಭಾನುವಾರ ಮಂಗಳೂರಿನ ವಸಂತ ಮಹಲ್ ಸಭಾಭವನದಲ್ಲಿ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ 'ಕಥಾ ಸಮಯ' ಕಥಾ ಗೋಷ್ಠಿಯ ಅಧ್ಯಕ್ಷತೆ ಮಹಿಸಿ ಮಾತನಾಡಿದರು.

ಕಥಾ ಸಮಯ, ಕಾವ್ಯ ಸಂಚಯ, ಸನ್ಮಾನ ಮಟ್ಟುಬಿಕೃತಿ ಬಿಡುಗಡೆ ಕಾರ್ಯಕ್ರಮವನ್ನು ಡಾ.ಸುರೇಶ್ ನೆಗಳಗುಳಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ' ಪರಿಷತ್ತಿನ 8 ನೇ ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾ ಸಮ್ಮೇಳನವನ್ನು ಜುಲೈ ತಿಂಗಳಲ್ಲಿ ನಡೆಸುವ ಬಗ್ಗೆ ಜಿಲ್ಲಾಧ್ಯಕ್ಷರ ಜೊತೆ ಚರ್ಚಿಸಲಾಗಿದೆ'ಎಂದರು.

ಕಥಾ ಸಮಯ, ಕಾವ್ಯ ಸಂಚಯ, ಸನ್ಮಾನ ಮಟ್ಟುಬಿಕೃತಿ ಬಿಡುಗಡೆ ಕಾರ್ಯಕ್ರಮವನ್ನು ಡಾ.ಸುರೇಶ್ ನೆಗಳಗುಳಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ' ಪರಿಷತ್ತಿನ 8 ನೇ ಜಿಲ್ಲಾ ಸಮ್ಮೇಳನದ ಪೂರ್ವಭಾವಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಿಲ್ಲಾ ಸಮ್ಮೇಳನವನ್ನು ಜುಲೈ ತಿಂಗಳಲ್ಲಿ ನಡೆಸುವ ಬಗ್ಗೆ ಜಿಲ್ಲಾಧ್ಯಕ್ಷರ ಜೊತೆ ಚರ್ಚಿಸಲಾಗಿದೆ'ಎಂದರು.

ಅಮ್ಮಂದಿರ ದಿನದ ಹಿನ್ನೆಲೆಯಲ್ಲಿ ಅಮ್ಮ ಎಂಬ ಪರಿಕಲ್ಪನೆಗೆ ಅಧ್ಯಕ್ಷತೆ ನೀಡಿ ಪರಿಷತ್ತು ವಿನೂತನ ಪ್ರಯೋಗ ಮಾಡಿತು. ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ಕಲ್ಲಚ್ಚು ಪ್ರಕಾಶನದ ಅಧ್ಯಕ್ಷ ಮಹೇಶ್ ಆರ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಥಾ ಗೋಷ್ಠಿಯಲ್ಲಿ ರಶ್ಮಿ ಸನಿಲ್, ವ.ಉಮೇಶ್ ಕಾರಂತ,ಚಿತ್ರಾಶ್ರೀ ಕೆ ಎಸ್, ಅಪೂರ್ವ ಪುತ್ತೂರು, ಎಡ್ವರ್ಡ್ ಲೋಬೊ, ಅರುಣಾ ನಾಗರಾಜ್, ಜೀವಪರಿ ಪರಿಮಳ ಮಹೇಶ್,

ರೇಖಾ ನಾರಾಯಣ್ ತಮ್ಮ ಕಥೆಗಳನ್ನು ಪ್ರಸ್ತುತ ಪಡಿಸಿದರು.

ಕವಿಗೋಷ್ಠಿಯಲ್ಲಿ ಹಿರಿಯ ಕವಿ ಅಬ್ದುಲ್ ಸಮದ್ ಬಾವ,ಜಯರಾಮ್ ಪಡ್ರೆ,ಎಸ್ ಕೆ ಕುಂಪಲ,ವಿಶ್ವನಾಥ್ ಕುಲಾಲ್ ಮಿತ್ತೂರು,ಬದ್ರುದ್ದೀನ್ ಕೂಳೂರು,ವೆಂಕಟೇಶ್ ಗಟ್ಟಿ,ಗೀತಾ ಲಕ್ಷ್ಮೀಶ್ ಕೊಂಚಾಡಿ, ರೇಖಾ ಸುದೇಶ್ ರಾವ್,ಮಂಜುಶ್ರೀ ನಲ್ಕ, ಹಿತೇಶ್ ಕುಮಾರ್, ಮನೋಜ್ ಕುಮಾರ್ ಶಿಬಾರ್ಲ,ಇಬ್ರಾಹಿಂ ಖಲೀಲ್,ಆಕೃತಿ ಐ ಎಸ್ ಭಟ್, ಡಾ.ಸುರೇಶ್ ನೆಗಳಗುಳಿ,ರೇಮಂಡ್ ಡಿಕುನಾ,ಚಂದನಾ ಕೆ.ಎಸ್,ಸುಮಂಗಲ ದಿನೇಶ್ ಶೆಟ್ಟಿ,ಅರ್ಚನಾ ಎಂ ಬಂಗೇರ ಕುಂಪಲ,ಗೋಪಾಲಕೃಷ್ಣ ಶಾಸ್ತ್ರಿ,ಸೌಮ್ಯ ಗೋಪಾಲ್, ಸುಹಾನ ಸಯ್ಯದ್ ಎಂ,ಸೌಮ್ಯ ಆರ್ ಶೆಟ್ಟಿ, ಆನಂದ ರೈ ಅಡ್ಕಸ್ಥಳ ತಮ್ಮ ಕವಿತೆಗಳನ್ನು ವಾಚನ ಮಾಡಿದರು.

ಉತ್ಸಾಹಿ ಹವ್ಯಾಸಿ ಕಲಾವಿದ ರಾಮಾಂಜಿ ಅವರು ಅಮ್ಮನ ಕುರಿತು ಹಾಡೊಂದನ್ನು ಹಾಡಿ ಜನ ಮೆಚ್ಚುಗೆ ಪಡೆದರು.

ರೇಖಾ ನಾರಾಯಣ್ ಮತ್ತು ಅರ್ಚನಾ ಕುಂಪಲ ಕಾರ್ಯಕ್ರಮ ನಿರೂಪಿಸಿದರು.ಬಾಲ ಪ್ರತಿಭೆ ದಿಶಾ ಸಿ ಜಿ ಪ್ರಾರ್ಥನಾ ಗೀತೆ ಹಾಡಿದರು, ಮಂಗಳೂರು ಚುಸಾಪ ಅಧ್ಯಕ್ಷ ಕಾ ವೀ.ಕೃಷ್ಣದಾಸ್ ಸ್ವಾಗತಿಸಿ ಮಾಜಿ ಅಧ್ಯಕ್ಷ ರೇಮಂಡ್ ಡಿಕುನಾ ವಂದಿಸಿದರು.ಗುಣವತಿ ಕಿನ್ಯ, ಜತೆ ಕಾರ್ಯದರ್ಶಿ ವೆಂಕಟೇಶ್ ಗಟ್ಟಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.

ಇದೇ ಸಂದರ್ಭದಲ್ಲಿ ಉಳ್ಳಾಲ ತಾಲೂಕು ಅಧ್ಯಕ್ಷರನ್ನಾಗಿ ಎಡ್ವರ್ಡ್ ಲೋಬೋ ಮತ್ತು ಪುತ್ತೂರು ತಾಲೂಕಿನ ನೂತನ ಅಧ್ಯಕ್ಷರನ್ನಾಗಿ ಅಬ್ದುಲ್ ಸಮದ್ ಬಾವ ಅವರನ್ನು ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಶಿಫಾರಸಿನಂತೆ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ನೇಮಕ ಮಾಡಿ ಘೋಷಣೆ ಮಾಡಿದರು.