ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ 1920ರಲ್ಲಿ ಅರೆಬರೆ ಪತ್ತೆಯಾದ ನಾಗರಿಕತೆಯ ಉತ್ಖನನ ನಡೆಸಿ 13,000 ಅಪೂರ್ವ ಪುರಾತನ ಕಲಾಕೃತಿಗಳನ್ನು ಪತ್ತೆ ಮಾಡಲಾಗಿದೆ.
ಕ್ರಿ. ಪೂ. 3,000ದಿಂದ ಕ್ರಿ. ಪೂ. 4,500 ವರುಷ ಹಿಂದಿನ ಅಜ್ಞಾತ ನಾಗರಿಕತೆಗೆ ಇದು ಸೇರಿದೆ. ಕಂಚು, ಚಿನ್ನ, ಪಚ್ಚೆಗಳನ್ನು ಬಳಸಿದ ಕಲಾಕೃತಿಗಳು ಇವು. ಬೂದಿ, ಕಂದಕಗಳು, ಬಿದಿರನ ಮನೆಯ ಅವಶೇಷಗಳು, ಕಲ್ಲು ಅಡಿಪಾಯಗಳು ಇತ್ಯಾದಿ ಪತ್ತೆಯಾಗಿವೆ.