ದಿಲ್ಲಿಯ ಹೋಲಂಬಿ ಕಲನ್ ರೈಲು ನಿಲ್ದಾಣದಲ್ಲಿ ಓಡುತ್ತಿದ್ದ ಅಮೃತಸರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಎದುರಿಗೆ ಹಾರಿ ಮಹಿಳೆ ಮತ್ತು ಇಬ್ಬರು ಮಕ್ಕಳು ತಾಕೊಲೆ ಮಾಡಿಕೊಂಡಿದ್ದಾರೆ.

30ರ ಮಹಿಳೆ ಮತ್ತು 10 ಹಾಗೂ 5ರ ಪ್ರಾಯದ ಮಕ್ಕಳ ಗುರುತುಗಳು ಪತ್ತೆಯಾಗಿಲ್ಲ. ಸಬ್ಜಿ ಮಂಡಿ ಶವಾಗಾರಕ್ಕೆ ಸಾಗಿಸಿ ಛಿದ್ರವಾಗಿರುವ ಅವರ ದೇಹಗಳನ್ನು ಇಡಲಾಗಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಾವಿಗೆ ಶರಣಾದ ಇವರ ಗುರುತು ಪತ್ತೆಗೆ ಪ್ರಯತ್ನ ನಡೆದಿದೆ.