ಮಂಗಳೂರು:- ಉಡುಪಿ ಪವರ್ ಪ್ರೊಜೆಕ್ಟ್ ಪ್ರೈವಟ್ ಲಿಮಿಟ್ ಕಂಪೆನಿಯಿಂದ ಕೇರಳದ ಕಾಸರಗೋಡು ಜಿಲ್ಲೆಗೆ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪ್ರಸರಣ ಮಾರ್ಗವನ್ನು ರಚಿಸುವ ಸಲುವಾಗಿ ಉಡುಪಿಯ ಪಡುಬಿದ್ರೆಯಿಂದ ಕರ್ನಾಕದ ಸುಮಾರು 20 ಗ್ರಾಮಗಳ ಮೂಲಕ ಪ್ರಸರಣ ಮಾರ್ಗವನ್ನು ರಚಿಸಲು ಗ್ರಾಮಸ್ಥರ ಹಾಗೂ ಸ್ಥಳೀಯ ಆಡಳಿತದ ಒಪ್ಪಿಗೆಯಿಲ್ಲದೆ ಸರ್ವೆ ಕಾರ್ಯವನ್ನು ಖಾಸಗಿಯಾಗಿ ಮಾಡಿದ್ದು ಇತ್ತೀಚೆಗೆ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೋರಾಟ ಸಮಿತಿಯನ್ನು ರಚಿಸಿಕೊಂಡಿದ್ದು ಗಣತಂತ್ರ ದಿನವಾದ ಜನವರಿ 26 2021 ಆತಂಕಿತ ಸಂತ್ರಸ್ತರ ಜಮೀನಿನಲ್ಲಿ ಹಾಕಿರುವ ಗಡಿಗುರುತುಗಳನ್ನು ತೆರವುಗೊಳಿಸಿ ನಮ್ಮ ಭೂಮಿ - ನಮ್ಮ ಹಕ್ಕು ಅನ್ಯರಿಗೆ ಮಾರಾಟಕ್ಕಿಲ್ಲ ಕಾರ್ಪೋರೇಟ್ ಕಂಪೆನಿಗಳಿಗೆ, ಭೂ ದಲ್ಲಾಳಿಗಳಿಗೆ ಗ್ರಾಮಕ್ಕೆ ಪ್ರವೇಶವಿಲ್ಲ ಎಂಬ ನಾಮ ಫಲಕವನ್ನು ಅಳವಡಿಸುವ ಮೂಲಕ ಚಳವಳಿ ಆರಂಬಿಸಲಾಗಿದೆ,ಮುಂದುವರೆದ ಭಾಗವಾಗಿ ದಿನಾಂಕ ಫೆಬ್ರವರಿ 7, 2021 ರಂದು ಬಂಟ್ವಾಳದ ಲೊರಟ್ಟೋ ಪದವಿನಲ್ಲಿ ಈ ವಿದ್ಯುತ್ ಪ್ರಸರಣಾ ಮಾರ್ಗದ ರಚನೆಯಿಂದ ಪ್ರಕೃತಿ ಅರಣ್ಯ ಕೃಷಿ ಹಾಗೂ ಜನಜೀವನದ ಮೇಲೆ ಬೀರುವದುಷ್ಪರಿಣಾಮಗಳ ಕುರಿತು ಸಭೆ ನಡೆಸಿ ಯಾವುದೇ ಕಾರಣಕ್ಕೂ ಇಂತಹ ಖಾಸಗಿ ಕಂಪೆನಿಗಳಿಗೆ ಮಾರಕವಾದ ಯೋಜನೆಗಳನ್ನು ಅನುಷ್ಠಾನ ಮಾಡಲು ಬಿಡಬಾರದೆಂಬ ಒಕ್ಕೊರಳ ಶಪಥವನ್ನು ಮಾಡಲಾಗಿತ್ತು,

 ಈ ಕುರಿತು ಈ ಯೋಜನೆಯನ್ನು ತಕ್ಷಣ ಕೈ ಬಿಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಯನ್ನು ಒತ್ತಾಯಿಸಲು ರೈತ ಸಂಘದ ಬೇತೃತ್ವದಲ್ಲಿ ಉಡುಪಿ ಕಾಸರಗೋಡು 400 ಕೆ.ವಿ ವಿದ್ಯುತ್ ಪ್ರಸರಣಾ ಮಾರ್ಗದ ಆತಂಕಿತರ ಹೋರಾಟ ಸಮಿತಿ ನಿಯೋಗ ಬೇಟಿ ನೀಡಿ ಒತ್ತಾಯಿಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

  ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮ್ ನಾಥ್ ಶೆಟ್ಟಿ, ಹೋರಾಟ ಸಮಿತಿಯ ಸಂಚಾಲಕ ರೋಯ್ ಕಾರ್ಲೋ, ಹೋರಾಟ ಸಮಿತಿಯ ಕಾರ್ಯದರ್ಶಿ ಬೆನಡಿಕ್ಟ್ ಕಾರ್ಲೋ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.