ವಾರ್ಡ್ ಮರು ವಿಂಗಡಣೆ ಪೂರ್ಣಗೊಳಿಸಿ, ಓಬಿಸಿ ಮೀಸಲು ಪ್ರಕಟಿಸಿ ಇನ್ನು ಎಂಟು ವಾರದೊಳಗೆ ಬಿಬಿಎಂಪಿ- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿಧಾನ ಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ವಾರ್ಡ್ ವಿಂಗಡಿಸುವ ಕೆಲಸ ಮುಕ್ತಾಯದ ಹಂತದಲ್ಲಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಇದರಿಂದ ಯಾವ ರೀತಿಯ ತೊಂದರೆಯೂ ಆಗುವುದಿಲ್ಲ. ಎಲ್ಲ ನ್ಯಾಯಾಲಯದ ಆಜ್ಞೆಗೆ ತಕ್ಕಂತೆ ನಡೆಯುತ್ತದೆ ಎಂದು ಅವರು ಹೇಳಿದರು.