ಇಂದಿನ ದಿನದಲ್ಲಿ 115 ಮಿಮೀಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಕರಾವಳಿಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. 

ಭಾನುವಾರ ಮೇ 22ರಂದು 65 ಮಿಮೀಗಿಂತ ಹೆಚ್ಚು ಮಳೆ ಬೀಳುವ ನಿರೀಕ್ಷೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 83.9 ಮಿಮೀ ಮಳೆಯಾಗಿದೆ. ಬೈಂದೂರಿನಲ್ಲಿ ಅತಿ ಹೆಚ್ಚು 130.8 ಮಿಮೀ, ಕಾಪುವಿನಲ್ಲಿ ಕಡಿಮೆ 57.2 ಮಿಮೀ ಮಳೆ ಆಗಿದೆ.