ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕರಾದ ಬಿ. ಕೆ. ಹರಿಪ್ರಸಾದ್ ರವರು ಇಂದು ತಾ 20.5.2022ರಂದು ಮಂಗಳೂರಿನ ಶ್ರೀ ರಾಮಕೃಷ್ಣ ಮಠ ಕ್ಕೆ ಭೇಟಿ ಮಠದ ಅಧ್ಯಕ್ಷರಾದ ಶ್ರೀ ಜಿತಾಕಾನಂದ ಸ್ವಾಮೀಜಿ ಹಾಗೂ ಶ್ರೀ ಏಕಾಗಮ್ಯಾನಂದ ಸ್ವಾಮೀಜಿ ಯವರನ್ನು ಕಂಡು ಮಾತನಾಡಿ ಅವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ,ಎಐಸಿಸಿ ಕಾರ್ಯದರ್ಶಿ ಪಿ. ವಿ. ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಿಂ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ,ಶುಭೋದಯ ಆಳ್ವ, ಟಿ. ಕೆ. ಸುಧೀರ್, ದಿನೇಶ್ ಆಳ್ವ, ಸದಾಶಿವ ಅಮೀನ್, ನಮಿತಾ ರಾವ್, ದಿನೇಶ್ ರಾವ್, ರಮಾನಂದ ಪೂಜಾರಿ, ದುರ್ಗಾಪ್ರಸಾದ್,ಚಿತ್ತರಂಜನ್ ಶೆಟ್ಟಿ ಬೊಂಡಾಲ, ನಿತ್ಯಾನಂದ ಶೆಟ್ಟಿ, ಭಾಸ್ಕರ್ ರಾವ್, ಹೈದರ್ ಎಮ್ಮೆಕೆರೆ, ಚಂದ್ರಕಲಾ ಜೋಗಿ,ಗೀತಾ ಅತ್ತಾವರ, ಪ್ರವೀತಾ ಕರ್ಕೇರ, ವಿದ್ಯಾ ಮೊದಲಾದವರು ಉಪಸ್ಥಿತರಿದ್ದರು.