ಮಂಗಳೂರು: ದ.ಕ.ಜಿಲ್ಲಾಡಳಿತ, ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವಜ್ರ ಪರಿಹಾರ ಆಯೋಗ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಮತ್ತು ಬೆಸೆಂಟ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ರಾಹಕ ದಿನಾಚರಣೆ 2022 ಮಾರ್ಚ 15 ರಂದು ಬೆಸೆಂಟ್ ಕಾಲೇಜಿನಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಗ್ರಾಹಕ ವ್ಯಾಜ್ಯ ವಿಲೇವಾರಿ ಆಯೋಗದ ಸದಸ್ಯ ಪಿ.ವಿ.ಲಿಂಗರಾಜು ನೆರವೇರಿಸಿ ಆಯೋಗದಿಂದ ಗ್ರಾಹಕರಿಗೆ ಸಿಗುತ್ತಿರುವ ಸೌಲಭ್ಯದ ಮಾಹಿತಿ ಇತ್ತರು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಕೆ.ಜಿ.ಕುಲಕರ್ಣಿ ಇಲಾಖೆಯ ಕಾರ್ಯತಂತ್ರಗಳ ಪರಿಚಯ ಇತ್ತರು. ಒಕ್ಕೂಟದ ಸಂಪನ್ಮೂಲ ವ್ಯಕ್ತಿ ಆಶ್ನಿ ಗ್ರಾಹಕೀಕರಣ ಮತ್ತು ಪರಿಸರದ ಬಗೆಗೆ ಸಚಿತ ಮಾಹಿತಿ ನೀಡಿ ವಿವರಿಸಿದರು.
ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕಿ ಕು.ರಮಾ ಮಾಹಿತಿ ನೀಡಿದರು., ಮಂಗಳೂರು ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲ ಪ್ರೊ|ರಾಜ ಶೇಖರ್ ಹೆಬ್ಬಾರ್ ಗ್ರಾಹಕ ಸರ್ಟಿಕೇಟ್ ಬಗೆಗೆ, ಬಡಗ ಎಕ್ಕಾರು ಸ.ಪ್ರೌ.ಶ.ಯ ಚಿತ್ರಾ ಶ್ರೀ ತರಬೇತಿ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದರು. ಕಾಲೇಜುಗಳಲ್ಲಿ ನಡೆಸಿದ ಪ್ರಬಂಧ, ಕ್ವಿಜ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಒಕ್ಕೂಟದ ಉಪಾಧ್ಯಕ್ಷ ರಫೀಕ್ ಕುಕ್ಕಾಡಿ ವಿಜೇತರ ಪಟ್ಟಿ ವಾಚಿಸಿದರು. ಬೆಸೆಂಟ್ ಕಾಲೇಜಿನ ಪ್ರಾಚಾರ್ಯ ಡಾ|| ಸತೀಶ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಎಡ್ಮಿನ್ ಡಿಮೆಲ್ಲೋ, ಪುತ್ತೂರು ಫಿಲೋಮಿನಾ ಕಾಲೇಜಿನ ಪ್ರೊ| ದಿನಕರ ರಾವ್, ಉಪಸ್ಥಿತರಿದ್ದರು.
ಆಹಾರ-ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್ ರವರು ಸ್ವಾಗತಿಸಿದರು. ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ್ ಅಧ್ಯಕ್ಷ ಎಂ.ಜೆ. ಸಾಲಿಯಾನ್ ರವರು ಪ್ರಾಸ್ತಾವಿಕ ಮಾತನಾಡಿ 68 ಶಾಲಾ ಗ್ರಾಹಕ ಕ್ಲಬ್, 8 ಕಾಲೇಜು ಕ್ಲಬ್, ಇನ್ನರ್ ವೀಲ್, ನವೋದಯ ಸ್ವ ಸಹಾಯ ಸಂಘದ ಸದಸ್ಯರಿಗೆ ನಡೆಸಿದ ಕಾರ್ಯಕ್ರಮಗಳ ಮಾಹಿತಿ ಇತ್ತರು, ಬಂಟ್ವಾಳ ಕೊಡಂಗೆ ಶಾಲೆಯ ಗೀತಾ ಕುಮಾರಿ ಪ್ರಾರ್ಥಿಸಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ, ಒಕ್ಕೂಟದ ಜತೆ ಕಾರ್ಯದರ್ಶಿ ರಾಯಿ ರಾಜ ಕುಮಾರ್, ಮೂಡುಬಿದಿರೆ ಕಾರ್ಯಕ್ರಮ ನಿರ್ವಹಿಸಿದರು. ಒಕ್ಕೂಟದ ಖಜಾಂಚಿ ಜಯಪ್ರಕಾಶ ರಾವ್, ಅನುರಾಧಾ ರಾವ್, ಕಾಲೇಜಿನ ಉಪನ್ಯಾಸಕಿ ಶ್ರೀಮತಿ ನಯನಾ, ಐಶ್ವರ್ಯ ಕಾರ್ಯಕ್ರಮ ಸಂಘಟಿಸಿದ್ದರು. ಬೆಸೆಂಟ್ ಕಾಲೇಜಿನ ಉಪನ್ಯಾಸಕಿ ದೇವಿಕಾ ಆನಂದ್ ಧನ್ಯವಾದ ನೀಡಿದರು.