ಪ್ರಾಚೀನ ಭೈರವ ಆರಸರು ಆಳಿದ ಪ್ರಥಮ ರಾಜಧಾನಿ ಕೆರ್ವಾಶೆ ಪಕ್ಕದ ಸಾವಿರ ವರ್ಷ ಹಳೆಯ ಸುಮ್ಮಗುತ್ತುಬಂಡ ಸಾಲೆ ಪರಿಸರ ಬಜಗೋಳಿ ಯಿಂದ ರಾ.ಹೆ 169 ರಲ್ಲಿ 1.3ಕಿ.ಮೀ  ದೂರ ದಲ್ಲಿದೆ ಇಲ್ಲಿಯ ಧರ್ಮ ಶಾಲೆ  ಗೆ 22.2.22 ರಂದು ಯುಗಳ ಮುನಿಗಳಾದ ಪಪೂ 108 ಅಮೋಘ ಕೀರ್ತಿ ಪಪೂ 108 ಅಮರ ಕೀರ್ತಿ ಮುನಿ ರಾಜ್ ರ ಪುರ ಪ್ರವೇಶ ಬೆಳಿಗ್ಗೆ 9ಕ್ಕೆ ನೆರವೇರಿತು.

ಪರಮ ಪೂಜ್ಯ ಮೂಡು ಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಭಟ್ಟಾರಕ ಶ್ರೀಗಳ ಮಾರ್ಗದರ್ಶನ ದಲ್ಲಿ ಸಾಮೂಹಿಕ ರಿಷಿ ಮಂಡಲ ಆರಾಧನೆ ಅತ್ಯಂತ ಶ್ರದ್ದಾ ಭಕ್ತಿಯಿಂದ ನೆರವೇರಿತು. 

ನಿರೀಕ್ಷಾ ಸನತ್ ಕುಮಾರ್ ಜೈನ್, ಶ್ರೀ ಕಲಾ ಭೂಷಣ ರವಿರಾಜ್ ಕೀ ಬೋರ್ಡ್ ಮಿತ್ರ ಸೇನ್ ಉಪ್ಪಿ ನಂಗಡಿ ಭಕ್ತಿ ಗಾಯನ ದೊಂದಿಗೆ ಸಾಮೂಹಿಕ ಆರಾಧನೆ ಜರುಗಿತು.

ಆಶೀರ್ವಾದ ಮಾಡಿದ ಪಪೂ ಅಮೋಘ ಕೀರ್ತಿ ಮುನಿ ರಾಜ್ ಧಾರ್ಮಿಕ ಕೇಂದ್ರ ಗಳ ಅಭಿವೃದ್ಧಿ ಉತ್ತಮ ಕಾರ್ಯ ಯಾರೇ ಧರ್ಮ ಕಾರ್ಯ ಮಾಡಲಿ ಅವರಿಗೆ ಸಹಕರಿಸುದು ಧಾರ್ಮಿಕ ರ ಕರ್ತವ್ಯ ಧರ್ಮ ಶಾಲೆ ಉತ್ತಮ ಅಧ್ಯಾತ್ಮ ಕ್ಷೇತ್ರ ವಾಗಿ ಬೆಳೆಯುತ್ತಿರುದು ಸಂತೋಷ ವಾಗಿದೆ ಎಂದರು 108 ಅಮರ್ ಕೀರ್ತಿ ಮುನಿ ರಾಜ್ ಭಕ್ತಿ ಸಮರ್ಪಣೆ ಸೇವೆ ಧರ್ಮ ಕ್ಷೇತ್ರ ಗಳ ಕಾರ್ಯ ಅದನ್ನು ಮೂಡು ಬಿದಿರೆ ಶ್ರೀ ಗಳ ಮಾರ್ಗದರ್ಶನ ದಲ್ಲಿ ಉತ್ತಮ ರೀತಿ ಯಿಂದ ನಿರ್ವಹಿಸುತ್ತಿರುವುದು ಶ್ಲಾಘ ನಿಯ ಧರ್ಮ ಶಾಲೆ ಬಜಗೋಳಿ ಇನ್ನಷ್ಟು ವಿಕಾಸ ವಾಗಲಿ ಎಂದು ಹರಸಿದರು ಡಾ ಪದ್ಮ ಪ್ರಸಾದ್ ಅಜಿಲ, ಶಿವ ಪ್ರಸಾದ್ ಅಜಿಲ ವಿಶೇಷ ಅತಿಥಿ ಯಾಗಿ ದ್ದರು ಭಟ್ಟಾರಕರು ಅವರನ್ನು ಶಾಲು ಶ್ರೀಫಲ ನೀಡಿ ಹರಸಿ ಆಶೀರ್ವಾದ ಮಾಡಿದರು.

ಹಿರಿಯ ರಾದ ಬಜಗೋಳಿ ಸುಮ್ಮಗುತ್ತು ಬಂಡಶಾಲೆಯ ಲಲಿತಮ್ಮ, ಜಯವರ್ಮ ಹೆಗ್ಡೆ,ಪುಷ್ಪ ರಾಜ್ ಜೈನ್, ಪ್ರಮೋದ್ ಜೈನ್, ಮಂಗಳೂರು ಸುನೀಲ್ ಜೈನ್ ಅಂಡಾರು ಮಹಾವೀರ್, ಬಜಗೋಳಿ ಮಹಾವೀರ್, ರವಿರಾಜ್ ಚೌಟ, ಮಾಳ ಭುಜಬಲಿ ಹೆಗ್ಡೆ, ಮೊದಲಾ ದವರು ಉಪಸ್ಥಿತರಿದ್ದರು