ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‍ನ ಪರಿಶಿಷ್ಟ ಘಟಕದ ವತಿಯಿಂದ ಇತ್ತೀಚೆಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ದಲಿತೋದ್ಧಾರಕ ಪೂಜ್ಯನೀಯ ಕುದ್ಮುಲ್ ರಂಗರಾವ್‍ರವರ 160ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಂಗರಾವ್‍ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಮಾಜಿ ಸಚಿವರಾದ ಶ್ರೀ ಬಿ.ರಮಾನಾಥ ರೈಯವರು, ಸಾರಸ್ವತ ಬ್ರಾಹ್ಮಣ ವಂಶದಲ್ಲಿ ಹುಟ್ಟಿ ಅಸ್ಪ್ರಶ್ಯರ ರೋಧನೆಯನ್ನು ಮನಗಂಡು ಅವರ ಶ್ರೇಯೋಭಿವೃದ್ಧಿಗಾಗಿ ತನ್ನ ಇಡೀ ಜೀವನವನ್ನೇ ಅಸ್ಪ್ರಶ್ಯರ ಸೇವೆ ಮಾಡಿ ಅವರ ಏಳಿಗೆಗೆ ತನ್ನ ಅಂತ್ಯದವರೆಗೂ ಮುಡಿಪಾಗಿಟ್ಟ ಮಹಾಬ್ರಾಹ್ಮಣ್ಯರೇ ಪೂಜ್ಯನೀಯ ಕುದ್ಮುಲ್ ರಂಗರಾಯರು ಎಂದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾದ ಐವನ್ ಡಿ’ಸೋಜಾರವರು ಮಾತನಾಡಿ, ರಂಗರಾಯರ ಸೇವೆಯನ್ನು ಶಾಶ್ವತಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತದ ಸರ್ಕಾರ ಪುರಭವನಕ್ಕೆ ಅವರ ಹೆಸರಿಟ್ಟಿದೆ. ಅವರು ನಡೆದು ಬಂದ ಹಾದಿಯಲ್ಲೇ ಕಾಂಗ್ರೆಸ್ ಮುಂದುವರಿಯುತ್ತದೆ.

ಮಾಜಿ ಶಾಸಕರಾದ ಜೆ.ಆರ್ ಲೋಬೋ ಮಾತನಾಡಿ, ಬಹು ಕೋಟಿ ವೆಚ್ಚದಲ್ಲಿ ಬಾಬುಗುಡ್ಡೆಯಲ್ಲಿ ಕುದ್ಮುಲ್ ರಂಗರಾಯರ ಭವನವು ನಿರ್ಮಾಣಗೊಂಡಿದೆ. ಇದು ಕಾಂಗ್ರೆಸ್ ಅವರಿಗೆ ಕೊಟ್ಟ ಗೌರವ. ಪರಿಶಿಷ್ಟ ಏಳಿಗೆಗೆ ಕಾಂಗ್ರೆಸ್‍ನ ಸೇವೆ ಅಪಾರ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿಧಾನಪರಿಷತ್ತು ಸದಸ್ಯರಾದ ಹರೀಶ್ ಕುಮಾರ್ ಮಾತನಾಡಿ, ನಮ್ಮ ಜೀವನದಲ್ಲಿ ರಂಗರಾಯರ ಆದರ್ಶ ಹಾಗೂ ತತ್ವಗಳನ್ನು ಅನುಸರಿಸಿ ಮುಂದುವರಿದಲ್ಲಿ ಎಲ್ಲರೂ ಮಾನವ ಧರ್ಮದ ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಘಟಕದ ಅಧ್ಯಕ್ಷ ಶೇಖರ್ ಕುಕ್ಕೇಡಿ, ಬ್ಲಾಕ್ ಅಧ್ಯಕ್ಷರುಗಳಾದ ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸಲೀಂ, ಘಟಕದ ಬ್ಲಾಕ್ ಅಧ್ಯಕ್ಷರುಗಳಾದ ವಿಜಯಲಕ್ಷ್ಮೀ, ಮಿಥುನ್ ಕುಮಾರ್, ಮಾಜಿ ಮೇಂiÀiರ್ ಶಶಿಧರ್ ಹೆಗ್ಡೆ, ಗಣೇಶ್ ಪೂಜಾರಿ, ಮಾಜಿ ಕಾರ್ಪೋರೇಟರ್‍ಗಳಾದ ಕುಮಾರಿ ಅಪ್ಪಿ, ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು.