ಇವಾಗ ಸೋಷಿಯಲ್ ಮೀಡಿಯಾದಲ್ಲಿ ದಿನವೂ ಟೆಂಡಿಂಗ್ ನಲ್ಲಿ ಇರುವ ವಿಷಯಗಳು ಇವೆ ಅಲ್ಲಿ ಗಂಡ ಹೆಂಡತಿನ ಕೊಲೆ ಮಾಡಿದ ಹೆಂಡತಿ ಗಂಡನ ಕೊಲೆ ಮಾಡಿದಳು ಹಾಡುಹಗಲೇ ಪ್ರೇಮಿ ಪ್ರೇಯಸಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಇಲ್ಲ ಸೂಸೈಡ್ ಮಾಡಕೊಂಡರೂ ಅನ್ನುವ ವಿಷಯಗಳನ್ನೆ ಜಾಸ್ತಿ ನೋಡತ್ತೀವೇ ಕೇಳುತ್ತೇವೆ. ಒಬ್ಬರನ್ನ ಕೊಲೆ ಮಾಡೋದು ಅಷ್ಟು ಸುಲಭವಾಗುತ್ತೀದೀಯಾ ಜೈಲಲ್ಲಿ ಇರುವುದಕ್ಕೆ ಮನಸ್ಸು ತಯಾರಾಗುತ್ತೀದೀಯಾ ? ಇವಾಗೀನವರ ಮನಸ್ಥಿತಿಯನ್ನ ನೋಡಿದರೇ ಅವರಿಗೆ ತಿರಸ್ಕಾರಗಳನ್ನ ಸೋಲನ್ನ ಅವಮಾನ ನೋವುಗಳನ್ನ ಒಪ್ಪಕೊಳ್ಳುವ ಮನಸ್ಸೇ ಇಲ್ಲ.

ನಮಗೆ ನಮ್ಮ ಮನಸ್ಸು ಮಿತ್ರನಾಗಬಹುದು ಶತ್ರುನೂ ಆಗಬಹುದು ಎನ್ನುವ ಪ್ರಸಿದ್ಧವಾದ ನುಡಿ ಇದೆ. ಅದು ಅಕ್ಷರಶಃ ಸತ್ಯ.ನಾವು ನಮ್ಮ ಮನಸ್ಸನ್ನ ಹೇಗೆ ಮಾಡಿಕೊಳ್ಳುತ್ತೇವೂ ಹಾಗೆ ಆಗುತ್ತದೆ. ಮನಸ್ಸನ್ನ ಎಲ್ಲಾ ಸಂದರ್ಭದಲ್ಲೂ ಸ್ಥಿತದಲ್ಲಿ ಇಟ್ಟುಕೊಳ್ಳುವುದು ಒಂದು ಸಾಧನೆಯೇ ಸರಿ. ತನ್ನ ಮನವನ್ನು ಗೆದ್ದರೆ ಜಗತ್ತನ್ನ ಗೆದ್ದ ಹಾಗೆ ಅಂತಾ ಹಿರಿಯರು ಸುಮ್ಮನೆ ಹೇಳಿಲ್ಲ. ಬದುಕು ಬೇವು ಬೆಲ್ಲದ ಮಿಶ್ರಣ ಒಂದೇ ಸಮಾನವಾಗಿ ಇರುವುದಿಲ್ಲ ಕಷ್ಟ ಸುಖ ಆಘಾತ ಉದ್ವೇಗ ಸೋಲು ಗೆಲುವು ಅನಿರೀಕ್ಷಿತ ಘಟನೆಗಳು ನೆಡೆಯುತ್ತದೆ ಎಲ್ಲಾ ಸಂದರ್ಭದಲ್ಲೂ ಮನವನ್ನ ಗಟ್ಟಿಯಾಗಿ ಇಟ್ಟಕೊಳ್ಳಬೇಕು.
ದೇಹವನ್ನ ಗಟ್ಟಿಗೊಳಿಸಿಕೊಳ್ಳುವುದು ಆರೋಗ್ಯವಾಗಿ ಇಟ್ಟುಕೊಳ್ಳಲು ಸ್ನಾನ ಮಾಡಿ ಶುದ್ಧವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯವೂ ಹಾಗೆಯೇ ಮನಸ್ಸು ಆರೋಗ್ಯವಾಗಿರುವುದು ಗಟ್ಟಿಯಾಗಿ ಇರುವುದು ಅಷ್ಟೇ ಮುಖ್ಯ. ಮನಸ್ಸಿಗೂ ಸ್ನಾನ ಬೇಕು ಎಂತಹ ಸ್ನಾನ ಎಂದರೆ ಕಾಮ ಕ್ರೋಧ ಮದ ಮೋಹ ಲೋಭ ಮತ್ಸರ ಎಲ್ಲಾವೂ ನಿಯಂತ್ರಣದಲ್ಲಿ ಇಟ್ಟುಕೊಂಡು ಬೇಡವಾದ ಚಿಂತೆಗಳನ್ನ ಹೊರಗೆ ಹಾಕುತ್ತಾ ಶುದ್ಧವಾಗಿಸಿಕೊಳ್ಳುತ್ತಿರಬೇಕು ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಬೇಕು. ಮನಸ್ಸು ಒಂದು ರೀತಿಯ ರೆಕಾರ್ಡ್ ರ ಅದರಲ್ಲಿ ನಲಿವು ಸಂತೋಷ ಹಾಗೆಯೇ ಯಾರೇ ನೋವು ಮಾಡಲಿ ಯಾರೇ ಅವಮಾನ ಮಾಡಲಿ ಏನೇ ಘಟನೆಗಳು ನೆಡೆಯಲಿ ಎಲ್ಲಿ ಯಾವಾಗ ಎಲ್ಲಾವೂ ರೆಕಾರ್ಡ್ ಆಗಿ ಇರುತ್ತದೆ ಕೆಲವರು ಆಗಿ ಹೋದ ನೋವುಗಳನ್ನೇ ಪ್ಲೇ ಮಾಡಿಕೊಂಡು ಮತ್ತೆ ಮತ್ತೆ ನೋವು ಪಡುತ್ತಾನೆ ಇರುತ್ತಾರೆ. ಮನಸ್ಸನ್ನ ಪ್ರಶಾಂತವಾಗಿ ಇಟ್ಟುಕೊಳ್ಳಬೇಕು. ತಾಳ್ಮೆಯಿಂದ ಇರಬೇಕು ಆಗಿ ಹೋದ ಕಹಿ ಘಟನೆಗಳನ್ನ ಮರೆತು ಈ ಕ್ಷಣ ಈ ದಿನ ಖುಷಿಯಾಗಿರಬೇಕು.
ಮಾನಸಿಕ ಒತ್ತಡದಿಂದಲೇ ಹೆಚ್ಚಿನ ಕಾಯಿಲೆಗಳು ಬರುತ್ತವೆ. ಮಾನಸಿಕ ರೋಗಿಗಳು ಹೆಚ್ಚುತ್ತಿದ್ದಾರೆ ಖಿನ್ನತೆಯಿಂದ ಬಳಲುವವರ ಸಂಖ್ಯೆ ಅಧಿಕವಾಗಿದೆ.
ಸೂರ್ಯೋದಯಕ್ಕಿಂತ ಮೊದಲು ಎದ್ದು ರಾತ್ರಿ ಬೇಗನೆ ನಿದ್ರೆಗೆ ಶರಣಾಗುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. 4_5 ಮೈಲಿ ನಡೆದರೆ ವ್ಯಾಯಾಮ ಸಿಗುತ್ತದೆ. ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳ ಮೇಲೆ ದೃಷ್ಟಿ ಹಾರಿಸಿ ಹೊರಗಡೆ ಆಹಾರಕ್ಕಿಂತ ಮನೆಯಲ್ಲಿ ತಯಾರಿಸಿದ ಆಹಾರವೇ ಉತ್ತಮ ಆರೋಗ್ಯಕ್ಕೆ ಮಾನಸಿಕ ಒತ್ತಡ ನಿವಾರಣೆಗೆ ಯೋಗ ಸೂಕ್ತ ಪರಿಹಾರ. ಆದ್ದರಿಂದ ನಾವು ನಿತ್ಯ ಬದುಕಿನಲ್ಲಿ ಯೋಗ ಧ್ಯಾನ ಪ್ರಣಾಯಾಮಾವನ್ನು ಅಳವಡಿಸಿಕೊಳ್ಳಬೇಕು. ಯೋಗ ನಮ್ಮ ದೇಹವನ್ನು ಸದೃಢವಾಗಿಟ್ಟರೆ ಧ್ಯಾನವು ನಮ್ಮ ಮನಸ್ಸನ್ನು ಸದೃಢವಾಗಿಡುತ್ತದೆ.
ಇನ್ನೊಬ್ಬರ ಸಾಯಿಸೋದು ವೀರತ್ವ ವಲ್ಲ ನಾವು ಸೂಸೈಡ್ ಮಾಡಿಕೊಳ್ಳವುದು ವೀರತ್ವ ವಲ್ಲ ದೇಶಕ್ಕೋಸ್ಕರ ಪ್ರಾಣ ಕೊಡದು ವೀರತ್ವ. ಇನ್ನೊಬ್ಬರನ್ನ ಕ್ಷಮಿಸುವ ಗುಣ ನಮ್ಮ ಆದರೆ ಅದೇ ವೀರತ್ವ. ಕೊಲ್ಲಬೇಕಂತಾ ಇದ್ದರೆ ನಮ್ಮಲ್ಲಿ ಇರುವ ದ್ವೇಷ ಅಸೂಯೆ ಅವಮಾನ ನೋವು ಹಿಂಸೆಗಳನ್ನ ಕೊಲ್ಲಬೇಕು.
ಮನಸ್ಸು ಹೂವಿನ ತೋಟದಂತೆ ನಾವು ಸುಂದರವಾದ ಯೋಚನೆ ಸಕರಾತ್ಮಕ ಚಿಂತನೆಗಳಿಂದ ತುಂಬಿಸಿದರೆ ಸುಂದರವಾದ ತೋಟವಾಗಿ ನಮಗೆ ಖುಷಿ ನೀಡುತ್ತದೆ. ಅದೇ ಬೇಡವಾದದ್ದು ತುಂಬಿಸಿಕೊಂಡರೆ ಮುಳ್ಳು ಬೇಡವಾದ ಗಿಡ ಬೆಳದ ನಿಷ್ಪ್ರಯೋಜಕವಾಗುತ್ತದೆ. ನಮ್ಮ ಬದುಕನ್ನ ನಾವೇ ಸುಂದರವಾಗಿಸಿಕೊಳ್ಳಬೇಕು ಅದು ನಮ್ಮ ಕೈಯಲ್ಲೇ ಇದೆ ನಾವು ಪ್ರಯತ್ನಿಸಿಬೇಕು.
ರೇಷ್ಮಾ ಶೆಟ್ಟಿ
