ಕುಡ್ಮಿ ಸಿಗ್ಮೋ- 2026 ನಾಟಕ್ ಪೊಂತ್ ನಾಟಕ ಸ್ಪರ್ಧೆ ಕಾರ್ಯಕ್ರಮ

ಎಡಪದವು: ಕುಡ್ಮಿ ಸಿಗ್ಮೋತ್ಸವ ಸಮಿತಿಯು ಆಯೋಜಿಸಿದ ಕುಡ್ಮಿ ಸಿಗ್ಮೋ- 2026 ನಾಟಕ್ ಪೊಂತ್ ಕುಡುಬಿ ಸಮಾಜದ ಕೊಂಕಣಿ ಭಾಷಾ ನಾಟಕ ಸ್ಪರ್ಧೆ ಕಾರ್ಯಕ್ರಮ ಚಂದು‌ ನಿಕೇತನ ಸಭಾಂಗಣ ಎಡಪದವು ಮಂಗಳೂರು ಇಲ್ಲಿ ಆಗಸ್ಟ್ 09 ರಂದು ಜರಗಿತು.

ಕುಡುಬಿ ಸಮುದಾಯದ‌ ಹಿರಿಯ ರಂಗಕರ್ಮಿ, ನಟ, ನಿರ್ದೇಶಕ ಶ್ರೀ ಗಣಪತಿ ಗೌಡ ಪುತ್ತಿಗೆರವರು ಕುಡ್ಮಿ ಸಿಗ್ಮೋ- 2026 ನಾಟಕ್ ಪೊಂತ್ ನಾಟಕ ಸ್ಪರ್ಧೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಶುಭ ಹಾರೈಸಿದರು. ಪ್ರಾಸ್ತವಿಕವಾಗಿ ಮಾತನಾಡಿದ ಕುಡ್ಮಿ ಸಿಗ್ಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ವಿಜಯ ಗೌಡ ಶಿಬ್ರಿಕೆರೆ ರವರು ಜಾನಪದ ಕಲೆಯನ್ನು ಉಳಿಸುವ ಜೊತೆಗೆ ಕಲೆ ಸಂಸ್ಕೃತಿಯನ್ನು ಉಳಿವಿಗೆ ಭಾಷೆಯ‌ ಬಗ್ಗೆ ಗೌರವ ಅಭಿಮಾನವಿರಬೇಕು. ಭಾಷೆ ಉಳಿದರೆ ಕಲೆ ಸಂಸ್ಕೃತಿ ಉಳಿಯುವುದು, ನಾಟಕ್ ಪೊಂತ್ ಕಾರ್ಯಕ್ರಮವನದನ್ನು ಸಂಘಟಿಸುವುದರಮುಖ್ಯ ಉದ್ದೇಶವೇ ಭಾಷೆಯ ಉಳಿವು, ನಾಯಕತ್ವದ ಬೆಳವಣಿಗೆ ಸಮಾಜದ ಕಲಾವಿದರಿಗೆ ವೇದಿಕೆಯಾಗಿರುವುದಾಗಿದೆ.

ಉದ್ಘಾಟನಾ ವೇದಿಕೆಯಲ್ಲಿ ಉದ್ಘಾಟಕರಾಗಿ ಶ್ರೀಗಣಪತಿ ಗೌಡ ಪುತ್ತಿಗೆ, ದೂದ ಗೌಡ ಮುಚ್ವೂರು, ಕುಡ್ಮಿ ಸಿಗ್ಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಜನಾರ್ದನ ಗೌಡ‌ ಮುಚ್ಚೂರು, ವಿಜಯಗೌಡ ಶಿಬ್ರಿಕೆರೆ, ಡಾ| ಮನೋಹರ್ ನೆಲ್ಲಿಜೆ, ಅಧ್ಯಕ್ಷರಾದ ಲೋಕನಾಥ ಎಡಪದವು, ಮಹಿಳಾ ಸಮಿತಿ ಅಧ್ಯಕ್ಷೆ ನಮಿತಾ ಜನಾರ್ದನ‌ಎಡಪದವು ಕುಡುಬಿ ರತ್ನ ನರ್ಸುಗೌಡ ಕೊಣಾಜೆ, ಕುಡುಬಿ ಜಾನಪದ ರತ್ನ ನಾರಾಯಣ ಗೌಡ ಎಡಪದವು, ಗೋವಾದ ಆನಂದ್ ವೆಲಿಪ್, ಕೃಷ್ಣ ಗೌಡ ಚಿಲಿಂಬಿ, ಕೆ.ಸಿ ಸುರೇಶ್ ಶಕ್ತಿನಗರ, ಕಮಲಾಕ್ಷ ಕಣ್ಣೋರಿ, ಜಾನಪ್ಪ ಗೌಡ ಕೊಂಪದವು, ಜನಾರ್ದನ ಕೊಂಪದವು ಉಪಸ್ಥಿತರಿದ್ದರು.

ಕುಡುಬಿ ಕೊಂಕಣಿ ನಾಟಕ ಸ್ಪರ್ಧೆ, ಭರತನಾಟ್ಯ, ಜಾನಪದ ಕಲಾನೃತ್ಯ, ಗೋಪಾಲ ಗೌಡ ಸ್ಮರಣಾರ್ಥ ಕವಿಗೋಷ್ಠಿ, ಸಾಂಸ್ಕೃತಿಕ ನೃತ್ಯ ರೂಪಕ, ಸಾಧಕರಿಗೆ ಗೌರವಾರ್ಪಣೆ, ದೇಹದಾಡ್ಯ 9 ಪ್ರದರ್ಶನ, ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರಿಗೆ ಕುಡ್ಮಿ ಸಿಗ್ಮೋ – 2026 ನಾಟಕ್‌ ಪೊಂತ್ ನಾಟಕ‌ ಸ್ಪರ್ಧ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಜನಾರ್ದನ ಗೌಡ ಮುಚ್ಚೂರು, ಭಕ್ತಾಂಜಲಿ ರವರು ನಾಟಕ ಸ್ಪರ್ಧೆಯ ತೀಪುಗಾರರಾಗಿದ್ದರು.
ಕುಶಾಲ್ ಕುಮಾರ್ ಎಡಪದವು ಹಾಗೂ ಪ್ರೀತಮ್ ಮಿಜಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *