ಉಡುಪಿ ಜನವರಿ 29: ಭಾರತ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ಮೈ ಭಾರತ್ ಉಡುಪಿ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಓಆಖಈ) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಸಹಯೋಗದೊಂದಿಗೆ ಯುವ ಆಪದ್ ಮಿತ್ರ ಯೋಜನೆಯಡಿ 7 ದಿನಗಳ ವಸತಿ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಫೆಬ್ರವರಿ 08 ರಿಂದ 14 ರವರೆಗೆ ಉಡುಪಿಯ ಪ್ರಗತಿ ನಗರದ ಡಾ.ವಿ.ಎಸ್. ಆಚಾರ್ಯ ಸ್ಕೌಟ್ ಮತ್ತು ಗೈಡ್ ಜಿಲ್ಲಾ ತರಬೇತಿ ಕೇಂದ್ರದಲ್ಲಿಆಯೋಜಿಸಲಾಗುತ್ತಿದ್ದು, ಜಿಲ್ಲೆಯ 18 ರಿಂದ 40 ವರ್ಷದೊಳಗಿನ ಯುವ ಸ್ವಯಂಸೇವಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ಪಡೆದ ಅಭ್ಯರ್ಥಿಗಳಿಗೆ ಯುವ ಆಪದ್ ಮಿತ್ರ ಯೋಜನೆಯಲ್ಲಿ 10,000 ರೂ. ಮೌಲ್ಯದ ಎಮರ್ಜೆನ್ಸಿ ಕಿಟ್, ಮುಂದಿನ 3 ವರ್ಷಗಳವರೆಗೆ ಜೀವ ಮತ್ತು ಆರೋಗ್ಯ ವಿಮೆಯಿಂದ ರಕ್ಷಣೆ ಪಡೆಯಲು ವಿಮಾ ಪಾಲಿಸಿ ಮತ್ತು ಸರ್ಕಾರಿ ಪ್ರಮಾಣಪತ್ರವನ್ನು ನೀಡಲಾಗುವುದು.
ಅರ್ಜಿದಾರರು ಫೆಬ್ರವರಿ 02 ಒಳಗಾಗಿ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತಮ್ಮ ಹೆಸರನ್ನು
ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಮೈ ಭಾರತ್ ಜಿಲ್ಲಾ ಯುವ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
