ಸೈಬರ್ ಕ್ರೈಂ ನಲ್ಲಿ ಮಾಡಿದವರೂ ಮಾಡಿಸಿಕೊಂಡವರೂ ಅಪರಾಧಿಗಳಾಗ ಬಹುದು – ಎ ಸಿ ಪಿ ವಿಜಯ ಕ್ರಾಂತಿ

ಮಂಗಳೂರು, ನಾಟೇಕಲ್ಲು: ಸ್ಥಳೀಯ ಕಣಚೂರು ಆಯುರ್ವೇದ ಕಾಲೇಜು ಸಾರಥ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಹಾಗೂ ಸೈಬರ್ ಕ್ರೈಮ್ ಬಗೆಗಿನ ಮಾಹಿತಿ ಹಾಗೂ ಸಲಹೆಗಳನ್ನು ನೀಡುವ ಕಾರ್ಯಕ್ರಮವನ್ನು ನಡೆಸಲಾಯಿತು.

ಪ್ರಧಾನ ಉಪನ್ಯಾಸ ಹಾಗೂ ಮಾರ್ಗದರ್ಶನವನ್ನು ಮಂಗಳೂರು ದಕ್ಷಿಣದ ಎ ಸಿ ಪಿ ವಿಜಯ ಕ್ರಾಂತಿ ಅವರು ನೀಡಿದರು.

ಸೈಬರ್ ಕ್ರೈಮ್ ನಲ್ಲಿ ಇಕ್ಕಡೆ ಯವರು ಕೂಡಾ ಶಿಕ್ಷಾರ್ಹರಾಗುವ ಅಪಾಯವಿದೆ. ಹಾಗೆಯೇ ಮಾದಕ ವ್ಯಸನಕ್ಕೆ ಒಳಗಾದವನಿಗಿಂತ ಹೆಚ್ಚು ಅದಕ್ಕೆ ಕಾರಣೀ ಭೂತರು ದೊಡ್ಡ ಶಿಕ್ಷೆಗೆ ಅರ್ಹರಾಗುತ್ತಾರೆ ಎಂದರು. 

ಕಣಚೂರು ವಿದ್ಯಾಸಂಸ್ಥೆಗಳ ವೈದ್ಯಕೀಯ ಅರೆವೈದ್ಯಕೀಯ ಸಹಿತ ಎಲ್ಲಾ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭಾಧ್ಯಕ್ಷತೆಯನ್ನು ವೈದ್ಯಕೀಯ ಕಾಲೇಜು ಸಲಹಾ ಮುಖ್ಯಸ್ಥ ಡಾ ವೆಂಕಟ ರಾಯ ಎಂ ಪ್ರಭು ಅವರು ವಹಿಸಿದ್ದರು.

ಅವರು ಯುವಕರ ಕರ್ತವ್ಯ ಹಾಗೂ ಜವಾಬ್ದಾರಿ ಬಗ್ಗೆ ವಿಷದವಾಗಿ ಉಪದೇಶ ನೀಡಿದರು.

ಪಾಚಾರ್ಯ ರಾದ ಡಾ ವಿದ್ಯಾಪ್ರಭಾ ಸ್ವಾಗತ ನೀಡಿದರು.

ವೈದ್ಯಕೀಯ ಅಧೀಕ್ಷಕ ಡಾ. ಕಾರ್ತಿಕೇಯ ಪ್ರಸಾದ್ ಹಾಗೂ ಸಹೋದರ ಸಂಸ್ಥೆಗಳ ಪ್ರಾಚಾರ್ಯರೂ, ಶಿಕ್ಷಕರೂ ಉಪಸ್ಥಿತರಿದ್ದರು.

ಆಯುರ್ವೇದ ವೈದ್ಯಕೀಯ ಸಲಹೆಗಾರ ಡಾ. ಸುರೇಶ ನೆಗಳಗುಳಿ ಅವರು ಸಭಾಧ್ಯಕ್ಷರಿಗೆ ಸ್ವಾಗತ ಪುಷ್ಪ ಮತ್ತು ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿದರು.

ನೂತನ  ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಿರೂಪಣೆ, ಪ್ರಾರ್ಥನೆ ಹಾಗೂ ಧನ್ಯವಾದ ಸಮರ್ಪಣೆ ಮಾಡಿದ್ದರು.

Leave a Reply

Your email address will not be published. Required fields are marked *