37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2026: ಆಳ್ವಾಸ್‍ನ 22 ಕ್ರೀಡಾಪಟುಗಳು ದಕ್ಷಿಣ ವಲಯ ಕ್ರೀಡಾಕೂಟಕ್ಕೆ ಆಯ್ಕೆ

ಮೂಡುಬಿದಿರೆ: ಸಪ್ಟೆಂಬರ್ 16 ರಿಂದ 18 ರ ವರೆಗೆ ಪಾಂಡಿಚೇರಿಯ ಇಂದಿರಾ ಗಾಂಧಿ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯುವ 37ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್‍ನ 22 ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಭಾಗವಹಿಸುತ್ತಿರುವ ಕ್ರೀಡಾಪಟುಗಳ ಹೆಸರು :
ಬಾಲಕರ ವಿಭಾಗದಲ್ಲಿ: ದಯಾನಂದ – (400ಮೀ), ನೋವಲ್ ಆರ್ ಪಿ- (ಉದ್ದ ಜಿಗಿತ), ನಿತಿನ್ ಎಲ್‍ಜಿ – (ಚಕ್ರ ಎಸೆತ), ರೂಪೇಶ್ – (ಪೋಲೋ ವಾಲ್ಟ್), ಅಬ್ದುಲ್ ರಜಕ್ ಶಿಗ್ಗಾನ – (ಹ್ಯಾಮರ್ ತ್ರೋ), ಸಾಹಿಲ್ – (100 ಮೀ), ಸಮರ್ಥ್ ಸಂಜೀವ್ ಕುಮಾರ್ – (1000ಮೀ), ಆಕಾಶ್ ಹುಕ್ಕೇರಿ – (110ಮೀ ಹರ್ಡಲ್ಸ್), ಜಸ್ವೀನ್ ಥೋಮಸ್ – (ಎತ್ತರ ಜಿಗಿತ), ದಿಶಾಂತ್– (ಉದ್ದ ಜಿಗಿತ), ಹೆಚ್ ಮೈಲಾರಿ – (ಚಕ್ರ ಎಸೆತ), ಆರಂಭಮ್ ರಾಜು – (60ಮೀ), (80ಮೀ ಹರ್ಡಲ್ಸ್), ಕೌಶಿಕ್ ಪಿ ಶೆಟ್ಟಿಗಾರ್ – (80 ಮೀ ಹರ್ಡಲ್ಸ್), ಹರ್ಷದ್ ಗೌಡ – (ಉದ್ದ ಜಿಗಿತ), ಮೋಕ್ಷಿತ್ ಆರ್ ಗೌಡ – (ತ್ರಯತ್ಲಾನ್ ಬಿ), ಸುಭಾಷ್ ಆರ್ – (ತ್ರಯತ್ಲಾನ್ ಸಿ).

ಬಾಲಕಿಯರ ವಿಭಾಗದಲ್ಲಿ: ರೀತುಶ್ರೀ – (400ಮೀ), ಚರೀಷ್ಮಾ – (3000ಮೀ), (5000ಮೀ), ಬಾನವಿ ಪಿ ಎಸ್ – (400ಮೀ), ನಾಗಿಣಿ – (1000ಮೀ), ಭಗೀರಥಿ – (3ಕಿಮೀ ನಡಿಗೆ), ಮೇಘಾ ಅಶೋಕ್ ಪೂಜಾರಿ – (600ಮೀ).
ಆಯ್ಕೆಗೊಂಡ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಶುಭಹಾರೈಸಿದ್ದಾರೆ.

Leave a Reply

Your email address will not be published. Required fields are marked *