ಕಲಾಂಗಣದಲ್ಲಿ ಮಕ್ಕಳಿಂದ ಸುರ್‌ ಸುರಾಯ್

ಮಂಗಳೂರು: ಮಾಂಡ್‌ ಸೊಭಾಣ್ ತಿಂಗಳ ವೇದಿಕೆ ಸರಣಿಯ 290 ನೇ ಕಾರ್ಯಕ್ರಮವಾಗಿ ಸುರ್‌ ಸೊಭಾಣ್‌ ಗಾಯನ ಶಾಲೆಯ ವಿದ್ಯಾರ್ಥಿಗಳಿಂದ ಸುರ್‌ ಸುರಾಯ್‌ ಎಂಬ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಮತ್ತು ಕೊಂಕಣಿ ಹಾಡುಗಳ ಸಂಗೀತ ಸಂಜೆ ಕಲಾಂಗಣದಲ್ಲಿ ಪ್ರಸ್ತುತವಾಯಿತು.

ಫೆ. 01 ರಂದು ನಡೆದ ಈ ಕಾರ್ಯಕ್ರಮವನ್ನು ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚಾರ್ಡ್‌ ಮೊರಾಸ್‌ ಅವರು ಗಂಟೆ ಬಾರಿಸಿ ಉದ್ಘಾಟಿಸಿದರು. ಮಾಂಡ್‌ ಸೊಭಾಣ್‌ ಪದಾಧಿಕಾರಿಗಳಾದ ಲುವಿ ಜೆ ಪಿಂಟೊ, ರೊನಿ ಕ್ರಾಸ್ತಾ ಮತ್ತು ಎಲ್ರೊನ್‌ ರೊಡ್ರಿಗಸ್‌ ಉಪಸ್ಥಿತರಿದ್ದರು. ಆರಂಭದಲ್ಲಿ ಆಸ್ಟನ್‌ ಪಿಂಟೊ ಇವರಿಂದ ಕೊಳಲು ವಾದನ ನಡೆಯಿತು.

 ನಂತರ ನಿರ್ದೇಶಕಿ ಶಿಲ್ಪಾ ಕುಟಿನ್ಹಾ ನೇತೃತ್ವದಲ್ಲಿ ಮಕ್ಕಳು ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಕೆಲ ರಾಗಗಳನ್ನು ಹಾಗೂ ಕೊಂಕಣಿಯ ಕೆಲ ಹಾಡುಗಳನ್ನು ಪ್ರಸ್ತುತ ಪಡಿಸಿದರು.  ಎರಿಕ್‌ ಒಝೇರಿಯೊ ಸ್ವರ ಸಂಯೋಜಿಸಿದ ಕೆಲ ಹಾಡುಗಳನ್ನು ಸರ್ ಗಮದಲ್ಲಿ ಹಾಡುವ ಪ್ರಯೋಗ ಕೂಡಾ ನಡೆಯಿತು. ಸಹತರಬೇತುದಾರೆ ಡಿಯಲ್‌ ಡಿಸೋಜ, ಮತ್ತು ಮಕ್ಕಳ ಪೋಷಕರು ಕೂಡಾ ಒಂದೊಂದು ಹಾಡುಗಳನ್ನು ಹಾಡಿ ಮನರಂಜಿಸಿದರು. ಶಿಲ್ಪಾ ಕುಟಿನ್ಹಾ ರವರು ಪ್ರೇಕ್ಷಕರಿಗೆ  ರಾಗ ಯಮನ್‌ ದ ಕೆಲ ಸಾಲುಗಳನ್ನು ಹಾಡಲು ಪ್ರೋತ್ಸಾಹಿಸಿ, ಹಾಡಿದರು.

ಯುವ ಸಂಗೀತಗಾರ ಕೇತನ್‌ ಕ್ಯಾಸ್ತೆಲಿನೊ ನೇತೃತ್ವದಲ್ಲಿ ಆಶ್ವಿಲ್‌ ಕುಲಾಸೊ, ಹ್ಯಾನ್ಸನ್‌ ಲಸ್ರಾದೊ, ಶನನ್‌ ಕುಟಿನ್ಹಾ ಮತ್ತು ಐಸ್ಟನ್‌ ರೊಡ್ರಿಗಸ್ ಸಂಗೀತ ನೀಡಿದರು. ನೇಹಾ ಕ್ಯಾಸ್ತೆಲಿನೊ, ಆಸ್ಟನ್‌ ಫೆರ್ನಾಂಡಿಸ್‌, ರಿಯಾ ಮಸ್ಕರೇನ್ಹಸ್‌, ಸ್ಟ್ಯಾಲನ್‌ ಡಿಸೋಜ, ಲಿಸಾ ಪಿಂಟೊ, ನೊರ್ವಿನ್‌ ಡಿಸೋಜ, ರಿನ್ಸಿಯಾ ಮೊಂತೇರೊ, ಹೆಝೆಲ್‌ ಡಿಸೋಜ, ಸ್ವೀಥನ್‌ ಲೋಬೊ, ವಿಯೊನಾ ಪಿಂಟೊ, ಸಿಮೊನಾ ಸಲ್ಡಾನ್ಹಾ, ಆಂಡ್ರಿಕ್‌ ಪಿಂಟೊ, ಶನಿಯಾ ಡಿಸೋಜ, ಸಂಜನಾ ಮತಾಯಸ್‌ ಇವರು ಹಾಡುಗಳ ವಿವರಣೆ ನೀಡಿ, ನಿರೂಪಿಸಿದರು. 

Leave a Reply

Your email address will not be published. Required fields are marked *