ಶತಮಾನ ಕಂಡ ಸಾಹಿತ್ಯ ವಿಜ್ಞಾನಿ ಕಾರಂತರು: ಡಾ. ಗಣೇಶ್‍ ಅಮೀನ್ ಸಂಕಮಾರ್

ಉಡುಪಿ: ಕಾರಂತರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಯಾವುದೇ ವಿಚಾರವನ್ನು ವೈಜ್ಞಾನಿಕ ಮತ್ತು ವೈಚಾರಿಕವಾಗಿ ಗಮನಿಸುವ ಪ್ರವೃತ್ತಿ ಕಾರಂತರದ್ದು ವಿಚಾರಗಳ ಕುರಿತು ಅವರಿಗಿದ್ದ ಮುಂದಾಲೋಚನೆ ನಮ್ಮನ್ನು ಬೆರಗುಗೊಳಿಸುತ್ತದೆ. ಈ ದೃಷ್ಟಿಯಿಂದ ಕಾರಂತರನ್ನು ಕಳೆದ ಶತಮಾನದ ಸಾಹಿತ್ಯ ವಿಜ್ಞಾನಿ ಎಂದು ಕರೆಯಬಹುದು ಎಂದು ಖ್ಯಾತ ಜಾನಪದ ವಿದ್ವಾಂಸ ಮತ್ತು ಚಿಂತಕ ಡಾ. ಗಣೇಶ್‍ ಅಮೀನ್ ಸಂಕಮಾರ್ ಅವರು ಬ್ರಹ್ಮಗಿರಿಯ ರೆಡ್‍ಕ್ರಾಸ್ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆದ ಕಾರಂತರ 124 ನೇ ಜನ್ಮದಿನಾಚರಣೆ ಮತ್ತು ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರಂತರೊಂದಿಗಿನ ತಮ್ಮ ಒಡನಾಟದ ಕುರಿತಾಗಿ ಮಾತನಾಡಿದ ಚಿಂತಕ ಸಂಕಯ್ಯ ಶೆಟ್ಟಿ ಬಹುಜನರು ಕಾರಂತರು ಕೋಪಿಷ್ಟ ಎಂದು ತಪ್ಪು ತಿಳಿದಿದ್ದಾರೆ ಅವರದ್ದು ಸಾತ್ವಿಕ ಸಿಟ್ಟು ಆ ಸಿಟ್ಟಿನೊಳಗೆ ಮಗುವಿನ ಮುಗ್ಧತೆ ಮತ್ತು ತಾಯಿಯ ಪ್ರೀತಿ ಇತ್ತು ಎಂದರು.
ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್ ವೆಂಕಟರಮಣ ಐತಾಳ ಮಾತನಾಡಿ ಕಾರಂತರ ಬರಹಗಳಲ್ಲಿನ ವಿವಿಧ ತಾತ್ವಿಕತೆಗಳ ಆಯಾಮಗಳನ್ನು ವಿವರಿಸಿದರು.

ಮಣಿಪಾಲ ರೇಡಿಯೋ ಮೂಲಕ ಕಾರಂತರ ಕುರಿತಾದ ವಿವಿಧ ಲೇಖಕರ ವಿಚಾರಗಳು ಕಾರಂತಯಾನ ಹೆಸರಿನಲ್ಲಿ 35 ಕಂತುಗಳಲ್ಲಿ ಪ್ರಕಟವಾಗಿದೆ ಎಂದು ಸಹಾಯಕ ಪ್ರಾಧ್ಯಪಕಿ ಮತ್ತು ರೇಡಿಯೋ ಮಣಿಪಾಲದ ಸಂಯೋಜಕಿ ಡಾ.ರಶ್ಮಿ ಅಮ್ಮೆಂಬಳ ಹೇಳಿದರು.
ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕಾರಂತರ ಜನ್ಮದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯರಾದ ಆತ್ರಾಡಿ ಅಮೃತ ಶೆಟ್ಟಿ, ಡಾ. ಭಾರತಿ ಮರವಂತೆ, ಸಂತೋಷ್ ನಾಯಕ್ ಪಟ್ಲ, ಜಿ.ಎಂ ಶರೀಫ್ ಹೂಡೆ, ಡಾ.ಪ್ರಸಾದ್‍ ರಾವ್ ಉಪಸ್ಥಿತರಿದ್ದರು.

ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸದಸ್ಯರಾದ ಚೇತನ್ ಶೆಟ್ಟಿ ಕೋವಾಡಿ ನಿರೂಪಿಸಿ, ಸತೀಶ್‍ ಕೊಡವೂರು ವಂದಿಸಿದರು.

Leave a Reply

Your email address will not be published. Required fields are marked *