ನಿಟ್ಟೂರು ಶಾಲೆಯ 125ನೇ ವರ್ಷಾಚರಣೆ: ವಿಶೇಷ ಸಮಿತಿ ಕಚೇರಿ ಉದ್ಘಾಟನೆ

ಉಡುಪಿ: ಕಲಿತ ವಿದ್ಯಾಸಂಸ್ಥೆಯ ಏಳಿಗೆ ಸೇವೆ ಮಾಡುವುದು ಅತ್ಯಂತ ಪುಣ್ಯದ ಕೆಲಸವಾಗಿದ್ದು ಈ ಮೂಲಕ ವಿದ್ಯೆ ಪಡೆದ ಶಾಲೆಯ ಋಣ ತೀರಿಸಿದಂತಾಗುತ್ತದೆ ಎಂದು ಮಾಜಿ ಶಾಸಕರಾದ ಕೆ. ರಘುಪತಿ ಭಟ್ ಹೇಳಿದರು.

ಅವರು ಮಂಗಳವಾರ ಸಂಜೆ ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 125ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಯೋಜನೆಗಳಿಗೆ ಅನುಕೂಲವಾಗುವ  ಉದ್ದೇಶದಿಂದ, ವಿಶೇಷ ಸಮಿತಿಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

125 ವರ್ಷಗಳ ಹಿಂದೆ ನಮ್ಮ ಹಿರಿಯರು ಶಿಕ್ಷಣಕ್ಕೆ ನೀಡಿದ ಮಹತ್ವದಿಂದ ಇಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಶೈಕ್ಷಣಿಕವಾಗಿ ಉನ್ನತ ಸ್ಥಾನದಲ್ಲಿವೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿದ್ದರೂ ಕೂಡ ನಿಟ್ಟೂರು ಶಾಲೆಯಲ್ಲಿ 200ಕ್ಕೂ ಅಧಿಕ ವಿಧ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಶಾಲೆಯ ಶತಮಾನೋತ್ತರ ರಜಮಹೋತ್ಸವದ ಶುಭಸಂದರ್ಭದಲ್ಲಿ ಶಾಲಾ ಕಟ್ಟಡದ ನವೀಕರಣ ಹಾಗೂ ಹೊಸ ಕಟ್ಟಡ ಹಾಗೂ ಇತರ  ಯೋಜನೆಗಳಿಗೆ ಸಮಿತಿ ಮುಂದಾಗಿದೆ. ಈ ನಿಟ್ಟಿನಲ್ಲಿ ದಾನಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣಾಭಿಮಾನಿಗಳ ಸಹಕಾರದೊಂದಿಗೆ ಯೋಜಿತ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಆಶಯವನ್ನು ಸಮಿತಿ ಹೊಂದಿದ್ದು ಶಾಲಾ ಹಳೆವಿದ್ಯಾರ್ಥಿಗಳು, ಸಮಾಜದ ನಾಗರಿಕರು ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡೇನಿಸ್ ಕರ್ನೇಲಿಯೊ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಎಸ್ ಬಾರಿತ್ತಾಯ, ಹಳೆ ವಿದ್ಯಾರ್ಥಿ ಸುವರ್ಣ ನಿಧಿ ಟ್ರಸ್ಟ್ ಅಧ್ಯಕ್ಷರಾದ ಯು. ಜೆ. ಮಹಮ್ಮದ್ ಹನೀಫ್, ವಿಶೇಷ ಸಮಿತಿಯ ಕೋಶಾಧಿಕಾರಿ ಚಂದ್ರಕಾಂತ್ ಕೆ. ಎನ್ ಸಮಿ ತಿಯ ಪದಾಧಿಕಾರಿಗಳಾದ ಮತ್ತು ಸದಸ್ಯರಾದ ಲಕ್ಮೀನಾರಾಯಣ ಬಿ ಆಚಾರ್ಯ, ಕೃಷ್ಣ ಶ್ರೀಧರನ್, ಕೆ ಹರೀಶ್ ಆಚಾರ್ಯ,ಅಬೂಬಕ್ಕರ್ ಸಿದ್ದಿಕ್, ಮಹೇಶ್ ಟಿ, ಶೇಖರ್ ಪಿ, ಗಣೇಶ್ ಕುಮಾರ್, ವೈ ಹಯವದನ್ ಭಟ್, ಕೆ. ಶ್ರೀಪತಿ ಭಟ್, ಗುರುರಾಜ್ ಭಟ್, ಅನಿಲ್ ಗುಂಡಿಬೈಲು, ಸಮಿತಾ, ಶೋಭಿತಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಕವಿತಾ ಶೆಟ್ಟಿ, ಶಿಕ್ಷಕಿಯರಾದ ಗಿರಿಜಾ, ಸಪ್ನಾ, ರೇಖಾ, ಸೋಪಿಯಾ, ಮಂಜುಳ, ಕಸ್ತೂರಿ, ರುಕ್ಮಿಣಿ, ಅಂಗನವಾಡಿ ಶಿಕ್ಷಕಿ ಸವಿತಾ ಇವರೆಲ್ಲ ಉಪಸ್ಥಿತರಿದ್ದು, ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೇಲಿಯೊ ಸ್ವಾಗತಿಸಿ ವಿಶೇಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ. ಸದಾನಂದ ನಾಯಕ್ ಕಾರ್ಯನಿರೂಪಣೆ ಮತ್ತು ವಂದನಾರ್ಪಣೆ ಗೈದರು.

Leave a Reply

Your email address will not be published. Required fields are marked *