ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಬಂಟ್ವಾಳ ಮತ್ತು ತುಂಬೆ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ವರ್ಷ ಹಾಗೂ 17ವರ್ಷ ವಯೋಮಿತಿ ಒಳಗಿನ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಒಟ್ಟು 35 ಚಿನ್ನ, 31 ಬೆಳ್ಳಿ ಮತ್ತು 08 ಕಂಚಿನ ಪದಕಗಳೊಂದಿಗೆ 74 ಪದಕದೊಂದಿಗೆ ಆದಿತ್ಯ (1500ಮೀ, 800ಮೀ, 4400ಮೀ ರಿಲೇ), ಸುಭಾಷ್ (110ಮೀ ಹರ್ಡಲ್ಸ್, 4400ಮೀ ರಿಲೇ) ಅಮನ್ (4400ಮೀ ರಿಲೇ), ತುಷಾರ್ (4400ಮೀ ರಿಲೇ), ಮೇಘಾ (400ಮೀ, 4400ಮೀ ರಿಲೇ), ಸಮೀಕ್ಷಾ (400ಮೀ ಹರ್ಡಲ್ಸ್, 4400ಮೀ ರಿಲೇ), ಪೂರ್ವಿ (ಹ್ಯಾಮರ್ ಎಸೆತ), ಅನುಶ್ರೀ ಪಿ ಎಸ್ (4400ಮೀ ರಿಲೇ), ಸುಜಾತ (4400ಮೀ ರಿಲೇ), ಮೋಕ್ಷಿತ್ (80ಮೀ ಹರ್ಡಲ್ಸ್)ನಲ್ಲಿ ಕ್ರೀಡಾಕೂಟದ 15 ನೂತನ ಕೂಟ ದಾಖಲೆಯನ್ನು ಮಾಡುವ ಮೂಲಕ 14 ವರ್ಷ ವಯೋಮಿತಿಯ ಬಾಲಕರ ತಂಡ ಪ್ರಶಸ್ತಿ, ಹಾಗೂ 17 ವರ್ಷ ವಯೋಮಿತಿ ಒಳಗಿನ ಬಾಲಕ ಬಾಲಕಿಯರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

ಫಲಿತಾಂಶ:
14ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ: ಮೋಕ್ಷಿತ್ – 80ಮೀ ಹರ್ಡಲ್ಸ್ (ಪ್ರಥಮ), 100ಮೀ (ದ್ವಿತೀಯ), 4100ಮೀ ರಿಲೇ (ದ್ವಿತೀಯ), ಮಂಥನ್ – 400ಮೀ (ಪ್ರಥಮ), 600ಮೀ (ಪ್ರಥಮ), 4100ಮೀ ರಿಲೇ (ದ್ವಿತೀಯ), ಪೌಡೇಶ್ – ಚಕ್ರ ಎಸೆತ (ಪ್ರಥಮ), ನಿಖಿಲ್ – 4100ಮೀ ರಿಲೇ (ದ್ವಿತೀಯ), ಮಲ್ಲಿಕಾರ್ಜುನ್ – 4100ಮೀ ರಿಲೇ (ದ್ವಿತೀಯ), ಅಭಿಜ್ಞಾ – 80ಮೀ ಹರ್ಡಲ್ಸ್ (ಪ್ರಥಮ), ಎತ್ತರ ಜಿಗಿತ (ದ್ವಿತೀಯ), 100ಮೀ (ತೃತೀಯ), 4100ಮೀ ರಿಲೇ (ದ್ವಿತೀಯ), ತನ್ಮಯ – ಎತ್ತರ ಜಿಗಿತ (ತೃತೀಯ), 4100ಮೀ ರಿಲೇ (ದ್ವಿತೀಯ), ಮೀನಾಕ್ಷಿ – 400ಮೀ (ತೃತೀಯ), 4100ಮೀ ರಿಲೇ (ದ್ವಿತೀಯ), ಪ್ರೀತಿ – ಗುಂಡು ಎಸೆತ (ದ್ವಿತೀಯ), ಲಲಿತಾ – 600ಮೀ (ದ್ವಿತೀಯ), 4100ಮೀ ರಿಲೇ (ದ್ವಿತೀಯ), ಸಿಂಚನಾ – ಚಕ್ರ ಎಸೆತ (ದ್ವಿತೀಯ)
17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಫಲಿತಾಂಶ : ಆದಿತ್ಯ – 1500ಮೀ (ಪ್ರಥಮ), 400ಮೀ (ದ್ವಿತೀಯ), 800ಮೀ (ಪ್ರಥಮ), 4400ಮೀ ರಿಲೇ (ಪ್ರಥಮ), ತುಷಾರ್ – 1500ಮೀ (ದ್ವಿತೀಯ), 800 ಮೀ (ದ್ವಿತೀಯ), 4400ಮೀ ರಿಲೇ (ಪ್ರಥಮ), ಆದರ್ಶ್ – 100ಮೀ (ದ್ವಿತೀಯ), 200ಮೀ (ದ್ವಿತೀಯ), 4100ಮೀ ರಿಲೇ (ಪ್ರಥಮ), ಸುಭಾಷ್ – 110 ಮೀ ಹರ್ಡಲ್ಸ್ (ಪ್ರಥಮ), 400ಮೀ ಹರ್ಡಲ್ಸ್ (ತೃತೀಯ), 4400ಮೀ ರಿಲೇ (ಪ್ರಥಮ), ಶ್ರೀಹರಿ – ಚಕ್ರ ಎಸೆತ (ಪ್ರಥಮ), ಕುಶಾಂತ್ – ಚಕ್ರ ಎಸೆತ (ದ್ವಿತೀಯ), ಗುಂಡು ಎಸೆತ (ಪ್ರಥಮ), ನಿಖಿಲ್ – ಜಾವೆಲಿನ್ ಎಸೆತ (ದ್ವಿತೀಯ), ಹ್ಯಾಮರ್ ಎಸೆತ (ಪ್ರಥಮ), ಅಮನ್ – 400ಮೀ ಹರ್ಡಲ್ಸ್ (ದ್ವಿತೀಯ), 4400ಮೀ ರಿಲೇ (ಪ್ರಥಮ), 4100ಮೀ ರಿಲೇ (ಪ್ರಥಮ), ಮಲ್ಲಪ್ಪ – 3000ಮೀ (ಪ್ರಥಮ), ನಿಂಗಣ್ಣ – ಪೋಲೋವಾಲ್ಟ್ (ದ್ವಿತೀಯ), ತ್ರಿವಿಧ ಜಿಗಿತ (ದ್ವಿತೀಯ), 4100ಮೀ ರಿಲೇ (ಪ್ರಥಮ), ಹರ್ಷದ್ – ತ್ರಿವಿಧ ಜಿಗಿತ (ತೃತೀಯ), ಚಕ್ರವರ್ತಿ – 4100ಮೀ ರಿಲೇ (ಪ್ರಥಮ), ಅನುಶ್ರೀ ಪಿ ಎಸ್ – 1500ಮೀ (ಪ್ರಥಮ), 4400ಮೀ ರಿಲೇ (ಪ್ರಥಮ), 800 ಮೀ (ದ್ವಿತೀಯ), ಮೇಘಾ – 400ಮೀ (ಪ್ರಥಮ), 800ಮೀ (ಪ್ರಥಮ), 4400ಮೀ ರಿಲೇ (ಪ್ರಥಮ), ಮಾಲಾ ಟಿ ಆರ್ – 100ಮೀ (ತೃತೀಯ), 4100ಮೀ ರಿಲೇ (ಪ್ರಥಮ), ಸವಿತಾ – ಗುಂಡು ಎಸೆತ (ತೃತೀಯ), ಪೂರ್ಣಿಮಾ – 1500ಮೀ (ತೃತೀಯ), ಅಮೂಲ್ಯಾ – 100ಮೀ ಹರ್ಡಲ್ಸ್ (ದ್ವಿತೀಯ), 400ಮೀ ಹರ್ಡಲ್ಸ್ (ದ್ವಿತೀಯ), ಸುಜಾತ – 400ಮೀ (ದ್ವಿತೀಯ), 4400ಮೀ ರಿಲೇ (ಪ್ರಥಮ), 4100ಮೀ ರಿಲೇ (ಪ್ರಥಮ), ರಕ್ಷಿತಾ – ತ್ರಿ ವಿಧ ಜಿಗಿತ (ಪ್ರಥಮ), ಉದ್ದ ಜಿಗಿತ (ಪ್ರಥಮ), ಎತ್ತರ ಜಿಗಿತ (ತೃತೀಯ), ಅನನ್ಯ – 3ಕಿಮೀ ನಡಿಗೆ (ದ್ವಿತೀಯ), ಜ್ಞಾನೇಶ್ವರಿ – ಉದ್ದ ಜಿಗಿತ (ದ್ವಿತೀಯ), ಸಮೀಕ್ಷಾ – 400ಮೀ ಹರ್ಡಲ್ಸ್ (ಪ್ರಥಮ), 4400ಮೀ ರಿಲೇ (ಪ್ರಥಮ), ವಿಜಯಲಕ್ಷ್ಮೀ – 3000ಮೀ (ಪ್ರಥಮ), ಅನುಶ್ರೀ ಎಂ – 3000ಮೀ (ದ್ವಿತೀಯ), ಪೂರ್ವಿ – ಹ್ಯಾಮರ್ ಎಸೆತ (ಪ್ರಥಮ), ಅಂಜುಶ್ರೀ – 4100ಮೀ ರಿಲೇ (ಪ್ರಥಮ), ವೈಷ್ಣವಿ – 4100ಮೀ ರಿಲೇ (ಪ್ರಥಮ) ಸ್ಥಾನ ಪಡೆದಿದ್ದಾರೆ.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.
