ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ 2026; ಆಳ್ವಾಸ್ ಶಾಲೆಗೆ 26 ಪದಕಗಳು: 12 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ

ಮೂಡುಬಿದಿರೆ: ಉಪನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಉತ್ತರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ನವಂಬರ್ 01 ರಿಂದ 03 ರ ವರೆಗೆ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟವನ್ನು ಪಡೆದುಕೊಂಡಿತು.

ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ 11 ಚಿನ್ನ, 08 ಬೆಳ್ಳಿ ಮತ್ತು 07 ಕಂಚಿನ ಪದಕಗಳೊಂದಿಗೆ ಒಟ್ಟು 26 ಪದಕಗಳನ್ನು ಪಡೆದುಕೊಂಡು ಬಾಲಕ ಬಾಲಕಿಯರ ಎರಡು ವಿಭಾಗದ ತಂಡ ಪ್ರಶಸ್ತಿ ಹಾಗೂ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರು.
ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರೀಯ ಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ 12 ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ.

ಫಲಿತಾಂಶ: ಬಾಲಕಿಯರ ವಿಭಾಗದಲ್ಲಿ: ಮೇಘಾ – 400ಮೀ (ಪ್ರಥಮ), 800ಮೀ (ದ್ವಿತೀಯ), 4400ಮೀ ರಿಲೇ (ಪ್ರಥಮ), ಸುಜಾತ – 4400ಮೀ ರಿಲೇ (ಪ್ರಥಮ), ಸಮೀಕ್ಷಾ – 4400ಮೀ ರಿಲೇ (ಪ್ರಥಮ), ಅನುಶ್ರೀ ಪಿ ಎಸ್ – 4400ಮೀ ರಿಲೇ (ಪ್ರಥಮ), ವೀಕ್ಷಾ – 4100ಮೀ ರಿಲೇ (ದ್ವಿತೀಯ), ಅನುಶ್ರೀ ದಾಸ್ – 4100ಮೀ ರಿಲೇ (ದ್ವಿತೀಯ), ವೈಷ್ಣವಿ – 4100ಮೀ ರಿಲೇ (ದ್ವಿತೀಯ), ಮಾಲಾ – 4100ಮೀ ರಿಲೇ (ದ್ವಿತೀಯ), ಪೂರ್ವಿ – ಹ್ಯಾಮರ್ ಎಸೆತ (ದ್ವಿತೀಯ), ರಕ್ಷಿತಾ – ತ್ರಿವಿಧ ಜಿಗಿತ (ತೃತೀಯ).
ಬಾಲಕರ ವಿಭಾಗದಲ್ಲಿ: ಆದಿತ್ಯ– 800ಮೀ (ಪ್ರಥಮ), 4400ಮೀ ರಿಲೇ (ಪ್ರಥಮ), ತುಷಾರ್ – 800ಮೀ (ದ್ವಿತೀಯ), 4400ಮೀ ರಿಲೇ (ಪ್ರಥಮ), ಸುಭಾಷ್ – 110ಮೀ ಹರ್ಡಲ್ಸ್ (ದ್ವಿತೀಯ), 4400ಮೀ ರಿಲೇ (ಪ್ರಥಮ), ಅಮನ್ – 4400ಮೀ ರಿಲೇ (ಪ್ರಥಮ), 4100ಮೀ ರಿಲೇ (ತೃತೀಯ), ಕುಶಾಂತ್ – ಗುಂಡು ಎಸೆತ (ತೃತೀಯ), ಆದರ್ಶ್ – 4100ಮೀ ರಿಲೇ (ತೃತೀಯ), ಚಕ್ರವರ್ತಿ – 4100ಮೀ ರಿಲೇ (ತೃತೀಯ), ನಿಂಗಣ್ಣ ಗೌಡ – 4100ಮೀ ರಿಲೇ (ತೃತೀಯ), ಪೋಲೋವಾಲ್ಟ್ (ಪ್ರಥಮ), ತ್ರಿವಿಧ ಜಿಗಿತ (ದಿತೀಯ).

ರಾಜ್ಯಮಟ್ಟದಲ್ಲಿ 26 ಪದಕಗಳನ್ನು ಗೆದ್ದು ಸಮಗ್ರ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡಿರುವ ಆಳ್ವಾಸ್ ಶಾಲೆಯ ಕ್ರೀಡಾಪಟುಗಳ ಸಾಧನೆ ಹೆಮ್ಮೆಯ ಸಂಗತಿಯಾಗಿದೆ. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ 12 ಕ್ರೀಡಾಪಟುಗಳು ದೇಶದ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲಿ- ಡಾ. ಎಂ. ಮೋಹನ ಆಳ್ವ

Leave a Reply

Your email address will not be published. Required fields are marked *