ಮಂಗಳೂರು: ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದ ಮೇರಾ ಯುವ ಭಾರತ್ ವತಿಯಿಂದ ‘ವಿಕಸಿತ ಭಾರತ ಯುವ ನಾಯಕರ ಸಂವಾದ (VBYLD) 2027’ ರ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಕಸಿತ ಭಾರತ ಯುವ ನಗರದ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ನಡೆಯಿತು.

ವಿಕಸಿತ ಭಾರತ @2047 ರ ದೃಷ್ಟಿಕೋನಕ್ಕೆ ಪೂರಕವಾಗಿ ತಮ್ಮ ಉತ್ತಮ ನಾಯಕತ್ವ, ನೀತಿ ನಿರೂಪಣಾ ಒಳನೋಟ ಮತ್ತು ವಾಕ್ಚಾತುರ್ಯವನ್ನು ಪ್ರದರ್ಶಿಸಿದ ಸಂಕೇತ್ ಶೆಟ್ಟಿ ಪ್ರಥಮ ಬಹುಮಾನ, ಆತ್ಮಿಕಾ ದ್ವಿತೀಯ ಬಹುಮಾನ, ಪ್ರೇಕ್ಷಾ ಎಸ್ ತೃತೀಯ ಬಹುಮಾನ ಪಡೆದಿದ್ದಾರೆ.
ಈ ಮೂವರು ವಿಜೇತರು ಮುಂದಿನ ಹಂತವಾದ ಕರ್ನಾಟಕ ರಾಜ್ಯ ಮಟ್ಟದ ವಿಕಸಿತ ಭಾರತ ಯುವ ಸಂಸತ್ 2027 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ರಾಜ್ಯ ಮಟ್ಟದಲ್ಲಿ ಆಯ್ಕೆಯಾಗುವ ಅಗ್ರ ಮೂವರು ವಿಜೇತರು 2027ರ ಜನವರಿಯಲ್ಲಿ ನವದೆಹಲಿಯ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ (ಸಂವಿಧಾನ ಸದನ) ನಡೆಯಲಿರುವ ರಾಷ್ಟ್ರ ಮಟ್ಟದ ವಿಕಸಿತ ಭಾರತ ಯುವ ಸಂಸತ್ 2027 ರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಪ್ರತಿಷ್ಠಿತ ಅವಕಾಶವನ್ನು ಪಡೆಯಲಿದ್ದಾರೆ.
