ಇತ್ತೀಚೆಗೆ ಬೆಂಗಳೂರಿನ ರೋಲರ್ ಸ್ಕೇಟಿಂಗ್ ಕ್ಲಬ್ ಗಿಡ್ಡೇನ ಹಳ್ಳಿ ಇಲ್ಲಿ ನಡೆದ 42ನೇ ಕರ್ನಾಟಕ ರಾಜ್ಯಮಟ್ಟದ ಭಿನ್ನ ಸಾಮಥ್ರ್ಯದ ಮಕ್ಕಳ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನ ಆಯ್ಕೆ ಕ್ರೀಡಾಕೂಟದಲ್ಲಿ ಭಾಗವಹಿಸಿದ “ಸಾನಿಧ್ಯ” ಭಿನ್ನ ಸಾಮಥ್ರ್ಯದ ಮಕ್ಕಳ ವಸತಿಯುತ ಶಾಲೆಯ ವಿದ್ಯಾರ್ಥಿನಿ ಶ್ರೀಯಾ 12 ರಿಂದ 15 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ರಿಂಕಿನ ಒಂದು ಸುತ್ತು ಹಾಗೂ 2.5 ¸ ಸುತ್ತು ವಿಭಾಗದ ಎರಡೂ ಸ್ಪರ್ಧೆಯಲ್ಲೂ ಚಿನ್ನದ ಪದಕವನ್ನು ಗೆದ್ದುಕೊಂಡಿರುತ್ತಾಳೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ ಗೌತಮ್ ಪೂಜಾರಿ 18ವರ್ಷ ವಯೋಮಿತಿ ಮೀರಿದ ವಿಭಾಗದಲ್ಲಿ 2 ಬೆಳ್ಳಿಯ ಪದಕಗಳನ್ನು ಗೆದ್ದಿರುತ್ತಾನೆ.

ಹಾಗೂ ಅದೇ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹೇಶ್ ನಾಯ್ಕ್ 2 ಕಂಚಿನ ಪದಕಗಳನ್ನು ಗಳಿಸಿರುತ್ತಾನೆ. ಸಾನಿಧ್ಯದ ವಿದ್ಯಾರ್ಥಿ ಆರವ್ ಪಡುಕೋಣೆ 10ರಿಂದ 12ವರ್ಷ ವಯೋಮಿತಿಯ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾನೆ.
ರಾಷ್ಟ್ರಮಟ್ಟಕ್ಕೆ ಆಯ್ಕೆ: 2 ಚಿನ್ನದ ಪದಕಗಳನ್ನು ಪಡೆದಿರುವ ಕುಮಾರಿ ಶ್ರೀಯಾ ಹಾಗೂ 2 ಬೆಳ್ಳಿಯ ಪದಕಗಳನ್ನು ಪಡೆದಿರುವ ಗೌತಮ್ ಪೂಜಾರಿ 64ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ತಂಡದ ಮುಖಾಂತರ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.
