ಉಳ್ಳಾಲ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದ, ತನ್ನ ವೃತ್ತಿ ಜೀವನದಲ್ಲಿ ಯಾವುದೇ ಕಳಂಕವಿಲ್ಲದೆ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ದುಡಿದ ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿಯವರಿಗೆ ಅವರ 80ನೇ ವರ್ಷದ ಗೌರವ ಸನ್ಮಾನವನ್ನು ತೊಕ್ಕೊಟ್ಟು ಒಳಪೇಟೆಯ ಡಾ.ಅಂಬೇಡ್ಕರ್ ರಂಗಮಂದಿರದಲ್ಲಿ ನಡೆದ 2025-26ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವ ಸಮಾರಂಭದಲ್ಲಿ ನೀಡಲಾಯಿತು.

ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾಗ 1997ರಲ್ಲಿ ಪ್ರಾರಂಭವಾದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯ ಗೌರವಾಧ್ಯಕ್ಷರಾಗಿ ಜಯರಾಮ ಶೆಟ್ಟಿಯವರು 29 ವರ್ಷಗಳವರೆಗೆ ಅಬ್ಬಕ್ಕಳ ಹೆಸರನ್ನು ಇಡೀ ದೇಶಕ್ಕೆ ಪಸರಿಸಲು ಶ್ರಮಿಸಿದವರು ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ)ಯ ಅಧ್ಯಕ್ಷರಾದ ದಿನಕರ ಉಳ್ಳಾಲ್ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ, ಉಪಾಧ್ಯಕ್ಷರಾದ ದೇವಕಿ ಆರ್ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ, ಪದಾಧಿಕಾರಿಗಳಾದ ಡಿ.ಎನ್.ರಾಘವ, ಕೆ.ಎಂ.ಕೆ ಮಂಜನಾಡಿ, ಸತೀಶ್ ಭಂಡಾರಿ, ಚಿದಾನಂದ, ಪ್ರವೀಣ್ ಬಸ್ತಿ, ಮಾಧವ ಉಳ್ಳಾಲ್, ಪ್ರವೀಣ್ ಕುಮಾರ್, ಸುವಾಸಿನಿ ಜೆ ಬಬ್ಬುಕಟ್ಟೆ, ರತ್ನಾವತಿ ಜೆ ಬೈಕಾಡಿ, ಶಶಿಕಲ ಗಟ್ಟಿ, ಮಾಧವಿ ಉಳ್ಳಾಲ್, ಮಲ್ಲಿಕಾ ಭಂಡಾರಿ, ಅನುಪಮ ಸಿ, ವಾಣಿ ಲೋಕಯ್ಯ, ಶಶಿಕಾಂತಿ ಉಳ್ಳಾಲ್, ಸರೋಜಾ ಕುಮಾರಿ, ಸತ್ಯವತಿ, ಕ್ಲೇರಾ ಕುವೆಲ್ಲೋ, ರಾಜೀವಿ ಕೆಂಪುಮಣ್ಣು, ಮಲ್ಲಿಕಾ ಉಳ್ಳಾಲ್ ಬೈಲ್, ದೇವಕಿ ಯು ಬೋಳಾರ್, ಲತಾ ಶ್ರೀಧರ್, ಜಯಲಕ್ಷ್ಮಿ ಬಾಲಕೃಷ್ಣ, ಸ್ವಪ್ನಾ ಶೆಟ್ಟಿ, ವಾಣಿ ಗೌಡ, ಅಮಿತಾ, ಚಿತ್ರಾ ಜಗನ್, ಸ್ವಪ್ನಾ ಹರೀಶ್, ಆಶಾ ಗಟ್ಟಿ, ನಾಗರತ್ನ ಗಟ್ಟಿ, ಜಯಶ್ರೀ ಕೆ, ಚಂದ್ರಕಲಾ ಮಲ್ಯ, ಹೇಮಲತಾ, ಪ್ರೇಮಲತಾ, ಮಮತಾ, ಸುಜಾತ ಬಿ.ಶೆಟ್ಟಿ, ಸುಮಲತ ಕೊಣಾಜೆ, ಹೇಮಾ, ಉಷಾ ನಾಯ್ಕ್, ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.
