ಮೂಡುಬಿದಿರೆ: ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ಆದಿತ್ಯ ಅನಿಲ್ ಕೆಂಚಣ್ಣನವರ್ 99.8044641 (ಭೌತಶಾಸ್ತ್ರ 99.8091013, ರಸಾಯನಶಾಸ್ತ್ರ 98.7046712, ಗಣಿತಶಾಸ್ತ್ರ 99.8438804) ಪರ್ಸೆಂಟೈಲ್ ಪಡೆಯುವ ಮೂಲಕ ಮೂಡುಬಿದಿರೆ ತಾಲೂಕಿಗೆ ಪ್ರಥಮ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅತ್ಯುತ್ತಮ ಪರ್ಸೆಂಟೈಲ್ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.

ಹತ್ತನೇ ತರಗತಿಯಲ್ಲಿ ಸಾಧಾರಣ ಅಂಕ ಪಡೆದು ಸಂಸ್ಥೆಯಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಇಲ್ಲಿ ನೀಡುತ್ತಿರುವ ಅತ್ಯುನ್ನತ ಗುಣಮಟ್ಟದ ಪೂರಕ ತರಬೇತಿಯನ್ನು ಪಡೆದು ರಾಷ್ಟ್ರಮಟ್ಟದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಸಂಸ್ಥೆಯಿಂದ ನೀಡುತ್ತಿರುವ ತರಬೇತಿಯ ಗುಣಮಟ್ಟ ಮತ್ತು ಇಲ್ಲಿನ ಉಪನ್ಯಾಸಕರ ನಿರಂತರ ಪರಿಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಧನುಷ್ ಗುತ್ತಿ 98.7416995 ಪರ್ಸೆಂಟೈಲ್, ಮನ್ವಿತ್ ಎಸ್. ಪದ್ಮಶಾಲಿ 98.648776 ಪರ್ಸೆಂಟೈಲ್, ಸಮ್ಮಿತ್ ಎಚ್.ಎಸ್. 98.6168114 ಪರ್ಸೆಂಟೈಲ್, ಮಹೇಂದ್ರ ಎಂ. 98.3153881 ಪರ್ಸೆಂಟೈಲ್, ಅಕ್ಷಯ್ ಡಿ. 98.1064181 ಪರ್ಸೆಂಟೈಲ್, ರಿತಿಕ್ ಶೆಟ್ಟಿ 97.7817193 ಪರ್ಸೆಂಟೈಲ್, ಶಮಿತ್ ಪಿ. ಗೌಡ 97.5986939 ಪರ್ಸೆಂಟೈಲ್.
