ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಪರಿಸರ ಪರಿಹಾರ ನಿಧಿಯಲ್ಲಿ ಮಂಗಳೂರು ನಗರಕ್ಕೆ ರೂ.40.00 ಕೋಟಿ ಅನುದಾನ ಮಂಜೂರಾಗಿರುತ್ತದೆ. ಸದರಿ ಯೋಜನೆಯಡಿ ಈ ಕೆಳಕಂಡ ಪ್ರಮುಖ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

1. ಪಚ್ಚನಾಡಿ ಪ್ರದೇಶದಲ್ಲಿರುವASP (activatedsludgesprocess) ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಟಿ.ಪಿ ಯನ್ನು SBR (Sequencing Batch Reactor) ತಂತ್ರಜ್ಞಾನಕ್ಕೆ ಮೇಲ್ದರ್ಜೇಗೇರಿಸುವ ಕಾಮಗಾರಿ.- 6.87 ಕೋಟಿಗಳು.
2. ಬಜಾಲ್ ಎಸ್.ಟಿ.ಪಿಯಲ್ಲಿ ಕಾರ್ಯಕ್ಷಮತೆ ಯನ್ನು ಹೆಚ್ಚಿಸಲು ಬಬಲ್ ಡಿಫ್ಯೂಸರ್, ಏರ್ ಬ್ಲೋಯರ್ ಮತ್ತು ಕಂಟ್ರೋಲ್ ಪ್ಯಾನೆಲ್‍ಗಳನ್ನು ಅಳವಡಿಸುವ ಕಾಮಗಾರಿ.- 3.22 ಕೋಟಿಗಳು.
3. ಅತ್ತಾವರ ಪ್ರದೇಶದಲ್ಲಿ ಹೊಸ ವೆಟ್ ವೆಲ್ ನಿರ್ಮಾಣ ಕಾಮಗಾರಿ.- 3.33 ಕೋಟಿಗಳು.
4. ಮಂಗಳೂರು ನಗರದಲ್ಲಿ ಆಯ್ದ ಭಾಗಗಳಲ್ಲಿ 8.20 ಕಿ.ಮೀ ಉದ್ದದ ಮುಖ್ಯ ಒಳಚರಂಡಿ ಕೊಳವೆಯ ಉನ್ನತೀಕರಣ ಕಾಮಗಾರಿ. – 16.13 ಕೋಟಿಗಳು.
ಮಂಗಳೂರು ನಗರಕ್ಕೆ ಒಳಚರಂಡಿ ವ್ಯವಸ್ಥೆಯ ನಿರ್ಮಾಣ / ಉನ್ನತೀಕರಣ ಕಾಮಗಾರಿಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪಚ್ಚನಾಡಿ STP ಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.
