ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆಗೆ ದಿ ಇಂಡಿಯನ್ ಫೋರಮ್‍ನಿಂದ ಅಂತರಾಷ್ಟ್ರೀಯ “ವಿಮೆನ್ ಲೀಡರ್‍ಶಿಪ್ ಎಕ್ಸೆಲೆನ್ಸ್ ಅವಾರ್ಡ್”

ಮಂಗಳೂರು ಮಾ10: ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ಬಬಿತಾ ಸುರಜ್‍ ಅವರಿಗೆ ಸಾಮಾಜಿಕ ಮುಖಂಡರು ಮತ್ತು ಸಾಧಕರಿಗಾಗಿ “ದಿ ಇಂಡಿಯನ್ ಫೋರಮ್” ನಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು“ವಿಮೆನ್ ಲೀಡರ್‍ಶಿಪ್ ಎಕ್ಸೆಲೆನ್ಸ್ ಅವಾರ್ಡ್”ನ್ನು ನೀಡಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಸಾಧನೆಗಳು, ಸಮರ್ಪಣೆ, ನಾಯಕತ್ವ ಮತ್ತು ಸಮಾಜಕ್ಕೆ ಸ್ಪೂರ್ತಿದಾಯಕ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ಅವರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದರು.

Leave a Reply

Your email address will not be published. Required fields are marked *