ಕಾರ್ಕಳ: ಸ್ವಚ್ಛ ಭಾರತ ಪರಿಕಲ್ಪನೆಯು ಸಾಕಾರವಾಗುವುದಕ್ಕೆ ಶ್ರಮದಾನವು ಸಮಾಜ ಜಾಗೃತಿಯ ಮೂಲ ಸಾಧನವಾಗಿದೆ. ನಿರಂತರ ಮಾಡುವ ಸ್ವಚ್ಛತೆಯ ಶ್ರಮದಾನವು ನಾಗರಿಕ ಸಮಾ ಜದ ಮಧ್ಯೆ ಜಾಗೃತಿಯನ್ನು ಮೂಡಿಸುತ್ತದೆ. ಇದರಿಂದ ಮಹಾತ್ಮಾ ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸು ನನಸಾಗುತ್ತದೆ ಎಂದು ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಎಸ್. ಆರ್. ಹರೀಶ್ ಆಚಾರ್ಯ ಅವರು ಹೇಳಿದರು. ಅವರು ವಿಶ್ವಕರ್ಮ ಬ್ಯಾಂಕಿನ ಕಾರ್ಕಳ ಶಾಖೆ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ಆಯೋಜಿಸಿದ 18 ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದರು.

ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾರ್ಕಳ ತಾಲೂಕು ಚಿನ್ನದ ಕೆಲಸಗಾರರ ಸಂಘ ಅಧ್ಯಕ್ಷ ಎಂ ರಮೇಶ್ ಆಚಾರ್ಯ, ಪುರಸಭೆ ಸದಸ್ಯರಾದ ನಳಿನಿ ವಿಜೇಂದ್ರ ಇವರುಗಳು ಹಸಿರು ನಿಶಾನೆಯನ್ನು ತೋರಿಸುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು. ಕಾರ್ಕಳದ ನೆಕ್ಲಾಜೆ ಕಾಳಿಕಾಂಬ ದೇವಸ್ಥಾನ ಹಾಗೂ ಕರಿಯಕಲ್ಲು ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿಕೊಂಡು ಸ್ವಯಂಸೇವಕರು ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದರು.
ವಿಶ್ವಕರ್ಮ ಬ್ಯಾಂಕ್ ಉಪಾಧ್ಯಕ್ಷರಾದ ಜಗದೀಶ್ ಪಡುಪಣಂಬೂರು, ನಿರ್ದೇಶಕರಾದ ಡಿ. ಭಾಸ್ಕರ ಆಚಾರ್ಯ, ಭರತ್ ನಿಡ್ಪಳ್ಳಿ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ಇದರ ಆಡಳಿತ ಮುಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಜೊತೆ ಮುಕ್ತೇಸರರಾದ ಸುರೇಶ್ ಆಚಾರ್ಯ ನಿಟ್ಟೆ, ವ್ಯವಸ್ಥಾಪಕರಾದ ದಿನೇಶ್ ಆಚಾರ್ಯ, ಯುವಶಕ್ತಿ ಮಹಿಳಾ ಮಂಡಳಿ ಕಾರ್ಕಳ ಇದರ ಅಧ್ಯಕ್ಷೆ ಮಮತಾ ಕುಲಾಲ್ ಹಾಗೂ ಸದಸ್ಯರು, ಯುವಶಕ್ತಿ ಆಂಗ್ಲ ಮಾಧ್ಯಮ ಶಾಲೆ ನಿರ್ದೇಶಕಿ ಸುರೇಖಾ ಕೋಟ್ಯಾನ್ ಹಾಗೂ ಸದಸ್ಯರು, ಹಿರಿಯ ನಾಗರಿಕರದ ಸುನಂದಾ, ಲಯನ್ಸ್ ಕ್ಲಬ್ ಕಾರ್ಕಳ ಇದರ ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್, ನಿಟ್ಟೆ ಕಾಲೇಜಿನ ಪ್ರಾಧ್ಯಾಪಕರಾದ ಪ್ರಭಾ ನಿರಂಜನ್, ಡಾ. ಗುರು ಚರಣ್, ಡಾ. ಶ್ರೀರಾಮ್ ಮೊಗೇರಾಯ, ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಮಾನಸ ಮೊಗೇರಾಯ, ಸ್ವಚ್ಛ ಬ್ರಿಗೇಡ್ ಕಾರ್ಕಳ ಇದರ ಸಂಯೋಜಕರಾದ ಫೇಲಿಕ್ಸ್ ಜೋಸೆಫ್ ವಾಸ್, ಪದಾಧಿಕಾರಿಗಳಾದ ರಾಜೇಂದ್ರ ಅಮೀನ್, ನಿಖಿಲ್ ಕುಮಾರ್ ಹಾಗೂ ಸದಸ್ಯರು, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾದ್ಯಕ್ಷ ಪ್ರಕಾಶ್ ರಾವ್, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗುಣವರ್ಮ ಜೈನ್, ಸತೀಶ್ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ಶಾಖಾಧಿಕಾರಿ ನಿತಿನ್ ಕೆ. ಹಾಗೂ ಸಿಬ್ಬಂದಿಗಳು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಭಾಗವಹಿಸಿ ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.
