ಮಾಳ: ಗುರುಕುಲ ಶಾಲೆಯ ಅಮೃತ ಮಹೋತ್ಸವದ ಕೃತಜ್ಞತಾ ಸಭೆ ಮತ್ತು ವಿಶ್ವ ಮಹಿಳಾ ದಿನಾಚರಣೆ

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಕೃತಜ್ಞತಾ ಸಭೆ ಮತ್ತು ವಿಶ್ವ ಮಹಿಳಾ ದಿನಾಚರಣೆ ಮಾರ್ಚ್ 8 ರಂದು ಶಾಲೆಯ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.

ಪ್ರಧಾನ ಅಧ್ಯಕ್ಷ ಡಾ.ಎಂ ಪ್ರಭಾಕರ ಜೋಶಿ ಅವರು ಅತಿಥಿಗಳನ್ನು ಪರಿಚಯಿಸಿ ಶಾಲೆಯ 75 ವಸಂತಗಳ ಚಿತ್ರಣವನ್ನು ತೆರೆದಿಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಇವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಇರುವ ಈ ಕನ್ನಡ ಶಾಲೆಯಿಂದ ಮಕ್ಕಳಿಗಾಗುವ ಪ್ರಯೋಜನವನ್ನು ಪ್ರಶಂಸಿಸಿ ಸಂಸ್ಕಾರ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಮಾತನಾಡಿ ಕನ್ನಡ ಮಾಧ್ಯಮ ಎಳವೆಯಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮಲ್ಲಿರುವ ಅನೇಕ ಆಪ್ ಗಳನ್ನು ನಾವು ಇನ್ನೂ ಕೂಡ ಬಳಸುತ್ತಿಲ್ಲ ಎಲ್ಲವನ್ನು ಬಳಸಲು ಕಲಿತರೆ ಮಹತ್ತರ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಡಿಸೆಂಬರ್ ತಿಂಗಳಲ್ಲಿ ನಡೆದ ಅಮೃತ ಮಹೋತ್ಸವದ ಪೂರ್ಣ ಪ್ರಮಾಣದ ಸ್ಮರಣ ಸಂಚಿಕೆಯನ್ನು ಈ ಸಮಯದಲ್ಲಿ ಬಿಡುಗಡೆ ಮಾಡಲಾಯಿತು ಸ್ಮರಣ ಸಂಚಿಕೆ ಕೆಲಸ ಕಾರ್ಯಗಳ ಬಗ್ಗೆ ಸಂಪಾದಕ ಮಂಡಳಿಯ ಅರವಿಂದ ಚಿಪ್ಳೂಣ್ಕರ್ ಅವರು ಮಾಹಿತಿ ನೀಡಿದರು. ವಿಶ್ವ ಮಹಿಳಾ ದಿನದ ಅಂಗವಾಗಿ.. ತಮ್ಮ ನಿವೃತ್ತಿಯ ನಂತರ ಮುಖ್ಯೋಪಾಧ್ಯಾಯನಿಯಾಗಿ ಗುರುಕುಲ ಶಾಲೆಯಲ್ಲಿ ವೃತ್ತಿಯನ್ನು ಮುಂದುವರೆಸುತ್ತಿರುವ ಪೂರ್ಣಿಮಾ ಶೆಣೈ, ಊರಿನ ದೈವ ಸಂದಿಗಳನ್ನು ಕಂಠಪಾಠ ಹೇಳುವ ವನಜಾ ಪರವ ಇವರನ್ನು ಗೌರವಿಸಲಾಯಿತು.

ವೇದಗಣಿತ ಮತ್ತು ಅಬಾಕಸ್ ನಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನ ಗಳಿಸಿದ ಶಾಲಾ ವಿದ್ಯಾರ್ಥಿಗಳಾದ ಶರಣ್ಯಾ ಜೋಶಿ, ಅಪೇಕ್ಷಾ ಕಾಮತ್, ಸಮೃದ್ಧಿ, ಸಮೀರಣ ಮರಾಠೆ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶಾಲಾ ಅಧ್ಯಕ್ಷ ಗಜಾನನ ಮರಾಠೆ ಇವರು ಅಮೃತ ಮಹೋತ್ಸವ ಯಶಸ್ಸಿಗೆ ಕಾರಣಕರ್ತರಾದ ಮಹನೀಯರನ್ನು ಅಭಿನಂದಿಸಿ ಶಾಲೆಯ ಮುಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಭಾಧ್ಯಕ್ಷ ಶ್ರೀ ನಾಗಭೂಷಣ ಜೋಶಿ ಇವರು ಅಮೃತ ಮಹೋತ್ಸವದ ಸ್ಮರಣೀಯ ನೆನಪುಗಳನ್ನು ಮೆಲುಕು ಹಾಕಿ ತಾವು ಭಾಗಿಯಾದ 25-50-75 ವರ್ಷಗಳ ಮಹೋತ್ಸವದ ಬಗ್ಗೆ ಮಾತನಾಡಿದರು.

ಕಾರ್ಯದರ್ಶಿ ಗೀತಾ ಸೇರಿಗಾರ್ ಅಮೃತ ಮಹೋತ್ಸವದ ಲೆಕ್ಕಪತ್ರವನ್ನು ಮಂಡಿಸಿದರು. ಬಜಗೋಳಿಯ ಪ್ರಸಿದ್ಧ ವೈದ್ಯರಾದ ಡಾ. ವೆಂಕಟಗಿರಿ ರಾವ್ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯ ಸದಸ್ಯ ಸಂತೋಷ್ ಪೂಜಾರಿ ಅಮೃತ ಮಹೋತ್ಸವ ಸಮಿತಿಯ ಉಪಾಧ್ಯಕ್ಷೆ ಸುಮನಾ ಘಾಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಿಕ್ಷಕಿ ಅನುಪಮಾ ಸಮಿತಿಯ ಸದಸ್ಯೆ ವಸಂತಿ ಸಮಿತಿಯ ಸದಸ್ಯರಾದ ರವೀಂದ್ರನಾಥ ಜೋಶಿ ವಸಂತ ಶೇರಿಗಾರ್ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಶೋಭಾ ಅಬಾಕಸ್ ವಿಜೇತ ವಿದ್ಯಾರ್ಥಿಗಳ ಪುರಸ್ಕಾರವನ್ನು ನಿರ್ವಹಿಸಿದರು. ಸಮಿತಿಯ ಸದಸ್ಯರಾದ ಸುಧಾಕರ ಡೋಂಗ್ರೆ ವಸಂತಿ ವೆಂಕಟೇಶ ಗೋರೆ ಡಾ.ದಿನಕರ ಡೋಂಗ್ರೆ ದಿನೇಶ್ ಅಶೋಕ್ ಚಿನ್ನು, ವಿಶ್ವಾಸ್ ಶಿಕ್ಷಕರಾದ ಜ್ಯೋತಿ, ದೀಪಾ, ಶಿಲ್ಪಾ, ವಸಂತಿ, ಶುಭಾ, ಪ್ರಜ್ಞಾ, ಅಡುಗೆ ಸಹಾಯಕರಾದ ವನಿತಾ ಶೆಟ್ಟಿ ಮತ್ತು ಲಕ್ಷ್ಮೀ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಆಡಳಿತ ಮಂಡಳಿ ಸದಸ್ಯ ರಘುಪತಿ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ರಾಮ ಸೇರಿಗಾರ್ ವಂದನಾರ್ಪಣೆ ಗೈದರು.

Leave a Reply

Your email address will not be published. Required fields are marked *