ಕಾರ್ಕಳ: ಪ್ರವಾಸದಿಂದ ಇತಿಹಾಸದ ಅರಿವು – ಜೆ.ಸಿ.ಐ ಅಧ್ಯಕ್ಷ ಟಿ.ವಿ.ಎನ್ ಮೂರ್ತಿ

ಕಾರ್ಕಳ: ಮನುಷ್ಯ ಒಂದೇ ಕಡೆ ನಿಲ್ಲದೆ ಪ್ರವಾಸ ಮಾಡಿದುದರಿಂದಲೇ ಇತಿಹಾಸದ ಅರಿವು ಆಗಲು ಸಹಕಾರಿಯಾಯಿತು. ಪ್ರವಾಸ ಮಾಡುವುದರಿಂದ ನೈಜ ಅನುಭವವನ್ನು ಪಡೆಯಬಹುದು ಎಂದು ಜೆ.ಸಿ.ಐ.ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಟಿ.ವಿ.ಎನ್ ಮೂರ್ತಿಯವರು ಹೇಳಿದರು. ಅವರು ಕಾರ್ಕಳ ಅನಂತಶಯದ ರೋಟರಿ ಬಾಲ ಭವನದಲ್ಲಿ ನಡೆದ ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮೂಡಬಿದ್ರಿ ಇದರ ಅಂತರ್ ಜಿಲ್ಲಾ ಜಂಟಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ರೋ. ಗಣೇಶ್ ಸಾಲಿಯಾನ್ ಸಂಪಾದಕತ್ವದ ಕ್ಲಬ್ಬಿನ ಗ್ರಹಪತ್ರಿಕೆ ಸರ್ವಿಸನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಸಮಾರಂಭದ ಅಧ್ಯಕ್ಷರೂ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿಯವರು ಜಂಟಿ ಸಭೆಗಳ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.

ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ರೋಟರಿ ಕ್ಲಬ್ಬಿನ ಅಧ್ಯಕ್ಷ ನಾಗರಾಜ್ ಹೆಗ್ಡೆ ಕಾರ್ಕಳ ಕ್ಲಬ್ಬಿನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು.

ಮೂಡಬಿದ್ರಿ ರೋಟರಿ ಕ್ಲಬ್ಬಿನ ಸದಸ್ಯ ಹಾಗೂ ರೋಟರಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣ ಪಿಎಂ ತನ್ನ ಕ್ಲಬ್ಬಿನ ಪರಿಚಯವನ್ನು ಮಾಡಿದರು.

ಇದೇ ಸಂದರ್ಭದಲ್ಲಿ ಕಾರ್ಕಳದ ಬಜಗೋಳಿ ಸಮೀಪದ ಗೋವುಗಳಿಗಾಗಿ ಗೋಶಾಲೆಯ ಸ್ಥಾಪನೆ ಹಾಗೂ ನಿರ್ಗತಿಕ ಅಸೌಖ್ಯದಲ್ಲಿರುವ ಶ್ವಾನ,ಬೆಕ್ಕುಗಳಿಗೆ ಆಶ್ರಯ ನೀಡಿ ಆರೈಕೆ ಮಾಡುತ್ತಿರುವ ಎಂ. ಕೆ .ವೀರಂಜಯ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

60ನೇ ಹುಟ್ಟುಹಬ್ಬವನ್ನು ಆಚರಿಸಿದ ವಲಯ 5 ರ ವಲಯ ಸೇನಾನಿ ಜಾನ್ ಆರ್ ಡಿ ಸಿಲ್ವ, ಮೂಡಬಿದ್ರೆ ಕ್ಲಬ್ಬಿನ ಕಾರ್ಯದರ್ಶಿ ಪವನ್ ಪೈ ವೇದಿಕೆಯಲ್ಲಿ ಉಪಸಿತರಿದ್ದು ಶುಭ ಹಾರೈಸಿದರು.

ಎರಡೂ ಕ್ಲಬ್ಬಿನ ಅಧ್ಯಕ್ಷರು ನೆನಪಿನ ಸಂಕೇತವಾಗಿ ಧ್ವಜ ವಿನಿಮಯವನ್ನು ಮಾಡಿಕೊಂಡರು.

ಅನೆಟ್ ಯಾಗ್ನಿಕಾ ಪ್ರಾರ್ಥಿಸಿದರು. ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.

Leave a Reply

Your email address will not be published. Required fields are marked *